ಸಂಸತ್ ಭದ್ರತಾ ವೈಫಲ್ಯ: ಸ್ಪೀಕರ್ ಭೇಟಿಯಾದ ಸಂಸದ ಪ್ರತಾಪ ಸಿಂಹ
ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಸಂಭವಿಸಿದ ಪ್ರಮುಖ ಭದ್ರತಾ ವೈಫಲ್ಯ ಹಾಗೂ ಈ ಸಂದರ್ಭ ಸಂದರ್ಶಕರ ಗ್ಯಾಲರಿಯಿಂದ ಹೊಗೆ ತುಂಬಿದ ಕ್ಯಾನಿಸ್ಟರ್‌ನೊಂದಿಗೆ ಕೆಳಕ್ಕೆ ಜಿಗಿದ ಇಬ್ಬರಲ್ಲಿ ಒಬ್ಬನಿಗೆ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ನೀಡಲಾಗಿತ್ತೆಂಬ ವಿಚಾರದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರು ಬುಧವಾರ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದಾರೆ ಎಂದು indiatoday.in ವರದಿ ಮಾಡಿದೆ.
ಆರೋಪಿಗಳ ಪೈಕಿ ಒಬ್ಬಾತ ಸಾಗರ್ ಶರ್ಮಾ ಎಂಬಾತನ ತಂದೆ ತಮ್ಮ ಕ್ಷೇತ್ರವಾದ ಮೈಸೂರಿನ ನಿವಾಸಿಯಾಗಿದ್ದು, ಸಂಸತ್ ಕಟ್ಟಡಕ್ಕೆ ಭೇಟಿ ನೀಡಲು ಪಾಸ್ ನೀಡಲು ಅನುಮತಿ ಕೋರಿದ್ದ ಎಂದು ಪ್ರತಾಪ್ ಸಿಂಹ ಸ್ಪೀಕರ್‌ಗೆ ಹೇಳಿದ್ದಾರೆನ್ನಲಾಗಿದೆ.
ಸಾಗರ್ ಶರ್ಮ ಸಂಸತ್ತಿಗೆ ಭೇಟಿ ನೀಡುವಂತಾಗಲು ತಾವು ತಮ್ಮ ಕಚೇರಿ ಮತ್ತು ಆಪ್ತ ಸಹಾಯಕನೊಂದಿಗೆ ಸಂಪರ್ಕದಲ್ಲಿದ್ದುದಾಗಿಯೂ ಸಂಸದ ಹೇಳಿದ್ದಾರೆ. ಇದರ ಹೊರತಾಗಿ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.