ಪ.ಬಂ.: ಮೂರನೇ ದಿನಕ್ಕೆ ಕಾಲಿಟ್ಟ ಟಿಎಂಸಿ ಧರಣಿ

Update: 2023-10-07 16:05 GMT

ಅಭಿಷೇಕ್ ಬ್ಯಾನರ್ಜಿ | Photo: PTI 

ಕೋಲ್ಕತಾ: ಟಿಎಂಸಿಯ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ರಾಜಭವನದ ಹೊರಗೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ ಮೂರನೇ ದಿನಕ್ಕೆ ಕಾಲಿರಿಸಿದೆ.

ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತಮ್ಮನ್ನು ಪ್ರತಿಭಟನಾ ಸ್ಥಳದಲ್ಲಿ ಭೇಟಿಯಾಗುವ ವರೆಗೆ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದ್ದರು.

ಟಿಎಂಸಿ ನಾಯಕ ಡೆರಿಕ್ ಒಬ್ರಿಯಾನ್ ಅವರಿಂದ ಇಮೇಲ್ ಸ್ವೀಕರಿಸಿದ ಬಳಿಕ ಬೋಸ್ ದಾರ್ಜಿಲಿಂಗ್ನ ಗುಬುರ್ನೇಷನಲ್ ಮಾನ್ಸನ್ನಲ್ಲಿ ನಿಯೋಗವನ್ನು ಭೇಟಿಯಾಗಲು ಒಪ್ಪಿಕೊಂಡಿದ್ದರು ಎಂದು ರಾಜ್ಭವನದ ಮೂಲಗಳು ತಿಳಿಸಿವೆ.

ಕೇಂದ್ರದ ಎಂಜಿಎನ್ಆರ್ಇಜಿಎ ಪಾವತಿ ಬಾಕಿಯನ್ನು ಪಶ್ಚಿಮಬಂಗಾಳಕ್ಕೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ಆಗ್ರಹಿಸಿದ ಹಿನ್ನೆಲೆಯಲ್ಲಿ ನಿಯೋಗವನ್ನು ಭೇಟಿಯಾಗಲು ರಾಜ್ಯಪಾಲರು ನಿರ್ಧರಿಸಿದ್ದರು.

ಆದರೆ, ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬ್ಯಾನರ್ಜಿ ಅವರು, ರಾಜಭವನದ ಹೊರಗೆ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಕಾರರನ್ನು ಭೋಸ್ ಅವರು ಭೇಟಿಯಾಗುವ ವರೆಗೆ ಧರಣಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಟಿಎಂಸಿಯ ಮೂವರು ಸದಸ್ಯರ ನಿಯೋಗದಲ್ಲಿ ರಾಜ್ಯ ಪಂಚಾಯತ್ ಸಚಿವ ಪ್ರದೀಪ್ ಮುಜುಂದಾರ್ ಹಾಗೂ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಮಹುವಾ ಮೊಯಿತ್ರಾ ಅವರನ್ನು ಒಳಗೊಂಡಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರದಿಂದ ಪಶ್ಚಿಮಬಂಗಾಳಕ್ಕೆ ನೀಡಬೇಕಾಗಿದ್ದ ಎಂಜಿಎನ್ಆರ್ಇಜಿಎ ಬಾಕಿಯನ್ನು ತಡೆ ಹಿಡಿದಿರುವುದಾಗಿ ಆರೋಪಿಸಿ ಟಿಎಂಸಿಯ ದೊಡ್ಡ ಸಂಖ್ಯೆಯ ಸದಸ್ಯರು ಹಾಗೂ ಹಿರಿಯ ನಾಯಕರು ಬ್ರಿಟೀಷ್ ಕಾಲದ ಚಾರಿತ್ರಿಕ ಕಟ್ಟಡದತ್ತ ರ್ಯಾಲಿ ನಡೆಸಿದ ಬಳಿಕ ಬ್ಯಾನರ್ಜಿ ಅವರು ಗುರುವಾರ ಧರಣಿ ಆರಂಭಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News