ಜನರಿಗೆ ಉದ್ಯೋಗಗಳು ಸಿಗುತ್ತಿಲ್ಲ, ಅವರ ಜೇಬುಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ : ರಾಹುಲ್ ಗಾಂಧಿ

Update: 2024-02-12 16:10 GMT

ರಾಹುಲ್ ಗಾಂಧಿ | Photo: PTI  

ಕೊರ್ಬಾ (ಛತ್ತೀಸ್ ಗಡ) : ಸೋಮವಾರ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ದೇಶದಲ್ಲಿ ಜನರಿಗೆ ಉದ್ಯೋಗಗಳು ದೊರೆಯುತ್ತಿಲ್ಲ ಮತ್ತು ಹಣದುಬ್ಬರದ ಬಿಸಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಕೊರ್ಬಾ ಜಿಲ್ಲೆಯಲ್ಲಿ ತನ್ನ ‘ಭಾರತ ಜೋಡೊ ನ್ಯಾಯ ಯಾತ್ರೆ’ಸಂದರ್ಭದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,ಜನರ ಜೇಬುಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಮತ್ತು ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಜನರು ಎಚ್ಚೆತ್ತುಕೊಳ್ಳಬೇಕಿದೆ” ಎಂದರು.

ದೇಶದ ಜನಸಂಖ್ಯೆಯಲ್ಲಿ ಶೇ.74ರಷ್ಟು ಹಿಂದುಳಿದ ವರ್ಗಗಳು, ದಲಿತರು ಮತ್ತು ಆದಿವಾಸಿಗಳಾಗಿದ್ದಾರೆ. ಆದರೆ ಈ ಸಮುದಾಯಗಳಿಗೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿ ಭಾರತದ ಅಗ್ರ 200 ಕಂಪನಿಗಳ ಮಾಲಿಕರಲ್ಲಿ ಸೇರಿಲ್ಲ ಅಥವಾ ಅವುಗಳ ಆಡಳಿತ ನಿರ್ವಹಣೆಯಲ್ಲಿಲ್ಲ. ದೇಶದ ಎಲ್ಲ ಹಣವನ್ನು ಈ ಕಂಪನಿಗಳಿಗೆ ನೀಡಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಬಿಜೆಪಿ ಈ ದೇಶವನ್ನು ಹಿಂದು ರಾಷ್ಟ್ರ ಎಂದು ಕರೆಯುತ್ತಿದೆ. ಆದರೆ ಶೇ.74ರಷ್ಟು ಜನಸಂಖ್ಯೆ ಮತ್ತು ಸಾಮಾನ್ಯ ವರ್ಗದ ಬಡವರಿಗೆ ಏನೂ ಸಿಗುತ್ತಿಲ್ಲ ಎಂದು ರಾಹುಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News