98 ನಿಮಿಷಗಳ ಭಾಷಣ ಮಾಡಿ ದಾಖಲೆ ಬರೆದ ಪ್ರಧಾನಿ ಮೋದಿ

Update: 2024-08-15 11:44 GMT

 ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ತಮ್ಮ ಅತ್ಯಂತ ದೀರ್ಘವಾದ ಸ್ವಾತಂತ್ರ್ಯ ದಿನದ ಭಾಷಣವನ್ನು ನೀಡಿದ್ದಾರೆ. ಇಂದು ಪ್ರಧಾನಿಯ ಭಾಷಣದ ಅವಧಿ 98 ನಿಮಿಷಗಳಾಗಿತ್ತು. ಈ ಮೂಲಕ 2016ರಲ್ಲಿ ತಾವು ನೀಡಿದ್ದ 96 ನಿಮಿಷಗಳ ಭಾಷಣದ ಅವಧಿಯ ದಾಖಲೆಯನ್ನು ಪ್ರಧಾನಿ ಮುರಿದಿದ್ದಾರೆ.

ಮೋದಿ ಅತ್ಯಂತ ಕಿರು ಸ್ವಾತಂತ್ರ್ಯ ದಿನದ ಭಾಷಣ 2017ರಲ್ಲಿ ನೀಡಿದ್ದರು ಹಾಗೂ ಈ ಭಾಷಣದ ಅವಧಿ 56 ನಿಮಿಷಗಳಾಗಿದ್ದವು.

ಇಂದಿನ ಪ್ರಧಾನಿಯ ಭಾಷಣ ಅವರ ಅತ್ಯಂತ ದೀರ್ಘ ಭಾಷಣವಾಗಿರುವ ಹೊರತಾಗಿ ಕೆಂಪು ಕೋಟೆಯಲ್ಲಿ ನೀಡಲಾದ ಮೂರನೇ ಅತ್ಯಂತ ದೀರ್ಘ ಭಾಷಣವಾಗಿದೆ.

2014ರಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣ ನೀಡಿದ್ದರು ಹಾಗೂ ಆ ಭಾಷಣದ ಅವಧಿ 65 ನಿಮಿಷಗಳಾಗಿದ್ದರೆ 2015ರಲ್ಲಿ 88 ನಿಮಿಷ, 2018ರಲ್ಲಿ 83 ನಿಮಿಷ, 2019ರಲ್ಲಿ 92 ನಿಮಿಷ, 2020ರಲ್ಲಿ 90 ನಿಮಿಷ, 2021ರಲ್ಲಿ 88 ನಿಮಿಷ ಹಾಗೂ 2023ರಲ್ಲಿ 90 ನಿಮಿಷಗಳ ಭಾಷಣ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News