"ದುರದೃಷ್ಟಕರ, ಕಳವಳಕಾರಿ": ಸಂಸತ್ ಭವನ ಭದ್ರತಾ ವೈಫಲ್ಯದ ಕುರಿತು ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ

Update: 2023-12-17 07:52 GMT

ಪ್ರಧಾನಿ ನರೇಂದ್ರ ಮೋದಿ (PTI) 

ಹೊಸದಿಲ್ಲಿ: ಸಂಸತ್ ಭವನದ ಭದ್ರತಾ ವೈಫಲ್ಯದ ಕುರಿತು ಇದೇ ಪ್ರಥಮ ಬಾರಿಗೆ ತಮ್ಮ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, " ದುರದೃಷ್ಟಕರ, ಕಳವಳಕಾರಿ" ಎಂದು Dainik Jagran ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಈ ಘಟನೆಯನ್ನು ತುಂಬಾ ಗಂಬೀರವಾಗಿ ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದೂ ಮೋದಿ ಹೇಳಿದ್ದಾರೆ.

"ಲೋಕಸಭಾಧ್ಯಕ್ಷರು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ನಡುವೆ, ಸಂಸತ್ ಭವನದ ಭದ್ರತಾ ಲೋಪದ ಕುರಿತು ಟೀಕಿಸಿದ ವಿರೋಧ ಪಕ್ಷಗಳು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದವು. ಆದರೆ, ಆ ಆಗ್ರಹವನ್ನು ತಳ್ಳಿ ಹಾಕಿದ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಲೋಕಸಭೆಯೊಳಗಿನ ಭದ್ರತೆಯು ಲೋಕಸಭಾ ಕಾರ್ಯಾಲಯದಡಿ ಬರಲಿದ್ದು, ಅದರ ಮಧ್ಯಪ್ರವೇಶಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. "ಲೋಕಸಭಾ ಕಾರ್ಯಾಲಯದ ಹೊಣೆಗಾರಿಕೆಯ ನಡುವೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ. ನಾವದಕ್ಕೆ ಅವಕಾಶವನ್ನೂ ನೀಡುವುದಿಲ್ಲ" ಎಂದು ವಿರೋಧ ಪಕ್ಷಗಳ ಘೋಷಣೆಗಳಿಗೆ ಪ್ರತಿಯಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸ್ಪಷ್ಟನೆ ನೀಡಿದರು.

ಸಂಸತ್ ಭವನದ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಆರು ಮಂದಿಯ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸರು, ಅವರನ್ನು ಬಂಧಿಸಿದ್ದರು. ಈ ಪೈಕಿ ಇಬ್ಬರು ಆರೋಪಿಗಳು ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ಸಿಂಪಡಿಸಿ ಭಾರಿ ಆತಂಕ ಸೃಷ್ಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News