ಪಂಜಾಬ್‌ನಲ್ಲಿ ಕೋಳಿಗೆ ಪೊಲೀಸ್‌ ಭದ್ರತೆ!

Update: 2024-01-25 12:12 GMT

Photo: NDTV 

ಚಂಡೀಗಢ: ಪಂಜಾಬ್‌ನ ಭಟಿಂಡಾದ ಗ್ರಾಮವೊಂದರಲ್ಲಿ ಕೋಳಿ ಕಾಳಗ ನಡೆಯುತ್ತಿದ್ದ ಸ್ಥಳದಿಂದ ಪೊಲೀಸರು ಕೋಳಿಯೊಂದನ್ನು ರಕ್ಷಿಸಿ ಅದಕ್ಕೆ ರಕ್ಷಣೆ ಒದಗಿಸಿದ್ದಾರೆ. ಈ ಕೋಳಿಗೆ ಗಾಯವಾಗಿರುವುದರಿಂದ ಅದನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ಪ್ರಾಣಿ ಹಿಂಸೆ ಪ್ರಕರಣದಲ್ಲಿ ಪೊಲೀಸರು ಮೂವರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಭಟಿಂಡಾದ ಬಲ್ಲುವನ ಗ್ರಾಮದಲ್ಲಿ ಕೋಳಿ ಕಾಳಗ ಏರ್ಪಡಿಸಲಾಗಿತ್ತು ಹಾಗೂ ಅದರಲ್ಲಿ 200 ಜನರು ಭಾಗಿಯಾಗಿದ್ದರು. ಈ ವಿಚಾರ ತಿಳಿಯುತ್ತಲೇ ಎಲ್ಲರೂ ಪರಾರಿಯಾಗಿದ್ದರು. ಕೊನೆಗೆ ಪೊಲೀಸರ ಎರಡು ಕೋಳಿಗಳು ಹಾಗೂ ಒಬ್ಬ ವ್ಯಕ್ತಿ ಸಿಕ್ಕಿಬಿದ್ದ. ಈ ಕೋಳಿ ಕಾಳಗದ ಆಯೋಜಕರು ಪ್ರಾಣಿಗಳನ್ನು ಹಿಂಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳು ಕೋಳಿಗೆ ಭದ್ರತೆ ಒದಗಿಸಲಾಗಿದ್ದು ವೈದ್ಯಕೀಯ ಉಪಚಾರ ಮತ್ತು ಆಹಾರವನ್ನೂ ಒದಗಿಸಲಾಗಿದೆ. ಕೋಳಿ ಕಾಳಗದ ಸ್ಥಳದಿಂದ 11 ಟ್ರೋಫಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದು ಮೂವರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ರಕ್ಷಿಸಲಾಗಿರುವ ಕೋಳಿಯನ್ನು ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಬಳಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೋಳಿಯ ಜವಾಬ್ದಾರಿಯನ್ನುಪೊಲೀಸರು ಒಬ್ಬ ವ್ಯಕ್ತಿಗೆ ವಹಿಸಿದ್ದು ಅದನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News