ದೇಶದ ಸಮಗ್ರ ಅಭಿವೃದ್ಧಿಗಾಗಿ ಅಂಬೇಡ್ಕರ್ ಆದರ್ಶಗಳ ಅಳವಡಿಕೆಗೆ ರಾಷ್ಟ್ರಪತಿ ಕರೆ

Update: 2024-04-13 17:13 GMT

ದ್ರೌಪದಿ ಮುರ್ಮು | PC : ANI 

ಹೊಸದಿಲ್ಲಿ: ಭಾರತೀಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಮುನ್ನಾದಿನವಾದ ಶನಿವಾರ ದೇಶದ ಜನರಿಗೆ ಶುಭಾಶಯಗಳನ್ನು ಸಲ್ಲಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು,ದೇಶದ ಸಮಗ್ರ ಅಭಿವೃದ್ಧಿಗಾಗಿ ಸಾಮೂಹಿಕವಾಗಿ ಶ್ರಮಿಸಲು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

‘ಸಾಮಾಜಿಕ ಬದಲಾವಣೆಯ ಹರಿಕಾರ ಮತ್ತು ಬಹುಮುಖಿ ವ್ಯಕ್ತಿತ್ವದ ಬಾಬಾಸಾಹೇಬ ಅಂಬೇಡ್ಕರ್ ಅವರು ನ್ಯಾಯಶಾಸ್ತ್ರಜ್ಞ,ಶಿಕ್ಷಣ ತಜ್ಞ,ಆರ್ಥಿಕ ತಜ್ಞ,ಸಮಾಜ ಸುಧಾರಕ ಮತ್ತು ರಾಜಕೀಯ ನಾಯಕರಾಗಿ ನಮ್ಮ ದೇಶಕ್ಕೆ ಮತ್ತು ಸಮಾಜಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ಅವರ ನಂಬಿಕೆ ಇಂದಿಗೂ ನಮ್ಮ ಪ್ರಜಾಪ್ರಭುತ್ವದ ಮತ್ತು ಉತ್ತಮ ಆಡಳಿತದ ಬುನಾದಿಯಾಗಿದೆ’ ಎಂದು ಮುರ್ಮು ಹೇಳಿದ್ದಾರೆ.

ಡಾ.ಅಂಬೇಡ್ಕರ್ ಅವರು ತನ್ನ ಸಂಪೂರ್ಣ ಜೀವನವನ್ನು ಸಮಾನತಾವಾದಿ ಸಮಾಜ ಸ್ಥಾಪನೆಗಾಗಿ ಮುಡಿಪಾಗಿಟ್ಟಿದ್ದರು ಮತ್ತು ಶೋಷಿತರ ಏಳಿಗೆಗಾಗಿ ಹೋರಾಡಿದ್ದರು ಎಂದೂ ರಾಷ್ಟ್ರಪತಿಗಳು ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News