ವಯನಾಡ್ ಲೋಕಸಭಾ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಸಾಧ್ಯತೆ

Update: 2024-06-14 16:10 GMT

 ಪ್ರಿಯಾಂಕಾ ಗಾಂಧಿ | PTI 

ಹೊಸದಿಲ್ಲಿ: ಒಂದು ವೇಳೆ ರಾಹುಲ್ ವಯನಾಡ್ ಲೋಕಸಭಾ ಕ್ಷೇತ್ರವನ್ನು ತ್ಯಜಿಸಿದರೆ, ಆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ವಯನಾಡ್ ಹಾಗೂ ರಾಯ್ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್, ಉಭಯ ಕ್ಷೇತ್ರಗಳಲ್ಲಿ ಭಾರೀ ಅಂತರದ ಜಯಗಳಿಸಿದ್ದರು. ಒಂದು ವೇಳೆ ರಾಹುಲ್ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಲ್ಲಿ ಅವರು ಪ್ರಧಾನಿಯನ್ನು ಕೂಡಾ 2-3 ಲಕ್ಷಗಲ ಅಂತರದಿಂದ ಸೋಲಿಸುತ್ತಿದ್ದರು ಎಂದು ಪ್ರಿಯಾಂಕಾ ಹೇಳಿದ್ದರು.

ಲೋಕಸಭಾ ಚುನಾವಣೆಯ ಬಳಿಕ ಮಲಪ್ಪುರಂಗೆ ಆಗಮಿಸಿದ್ದ ರಾಹುಲ್ , ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಂದರ್ಭ ತಾನು ವಯನಾಡ್ನ ಸಂಸದನಾಗಿ ಉಳಿಯಬೇಕೇ ಅಥವಾ ರಾಯಬರೇಲಿಯ ಸಂಸದನಾಗಿ ಮುಂದುವರಿಯಬೇಕೇ ಎಂಬ ಗೊಂದಲದಲ್ಲಿರುವುದಾಗಿ ಹೇಳಿದ್ದರು. ಏನೇ ಇದ್ದರೂ, ತಾನು ಈ ವಿಷಯವಾಗಿ ಕೈಗೊಳ್ಳುವ ನಿರ್ಧಾರದಿಂದ ರಾಯಬರೇಲಿ ಹಾಗೂ ವಯನಾಡ್ ಕ್ಷೇತ್ರಗಳ ಜನತೆಗೆ ಸಂತಸವನ್ನು ತರಲಿದೆಯೆಂದು ಅವರು ಹೇಳಿದ್ದರು.

ಈ ಮಧ್ಯೆ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಅವರು ಕೂಡಾ ರಾಹುಲ್ ವಯನಾಡ್ ಕ್ಷೇತ್ರವನ್ನು ತ್ಯಜಿಸುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ. ದೇಶವನ್ನು ಮುನ್ನಡೆಸಬೇಕಾಗಿರುವ ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರವನ್ನು ತ್ಯಜಿಸುತ್ತಿರುವುದಕ್ಕೆ ನಾವು ಬೇಸರಪಡಬಾರದು ಹಾಗೂ ಪ್ರತಿಯೊಬ್ಬರೂ ಅವರನ್ನು ಬೆಂಬಲಿಸಬೇಕೆಂದು ಅವರು ಹೇಳಿದ್ದಾರೆ.

ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆಯೆಂದು ಎನ್ಡಿಟಿವಿ ವರದಿ ಮಾಡಿದೆ. ಉತ್ತರಪ್ರದೇಶವು ರಾಜಕೀಯವಾಗಿ ನಿರ್ಣಾಯಕವಾದ ರಾಜ್ಯವಾಗಿರುವುದರಿಂದ ರಾಯಬರೇಲಿ ಕ್ಷೇತ್ರವನ್ನು ರಾಹುಲ್ ಅವರು ಉಳಿಸಿಕೊಂಡು, ಕೇರಳದ ವಯನಾಡ್ ಕ್ಷೇತ್ರವನ್ನು ತೊರೆಯುವ ಸಾಧ್ಯತೆಯಿದೆಯೆಂದು ಎನ್ಡಿಟಿವಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News