ವಯನಾಡಿನಲ್ಲಿ ಸಿಪಿಎಂ ಕಾರ್ಯಕರ್ತರಿಂದ ಪ್ರಿಯಾಂಕಾ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ

Update: 2025-01-28 23:09 IST
ವಯನಾಡಿನಲ್ಲಿ ಸಿಪಿಎಂ ಕಾರ್ಯಕರ್ತರಿಂದ ಪ್ರಿಯಾಂಕಾ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ

ಪ್ರಿಯಾಂಕಾ ಗಾಂಧಿ | PC : PTI 

  • whatsapp icon

ವಯನಾಡ್: ಕಳೆದ ವಾರ ಇಲ್ಲಿಯ ಮಾನಂದವಾಡಿ ಗ್ರಾಮದಲ್ಲಿ ಹುಲಿಯಿಂದ ಕೊಲ್ಲಲ್ಪಟ್ಟಿದ್ದ ಮಹಿಳೆಯ ಕುಟುಂಬದ ಭೇಟಿಗಾಗಿ ಮಂಗಳವಾರ ತೆರಳುತ್ತಿದ್ದ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಸಿಪಿಎಂ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು.

ವಯನಾಡ್ ಕ್ಷೇತ್ರದಿಂದ ಗೆದ್ದಿರುವ ಪ್ರಿಯಾಂಕಾ, ವಿಶೇಷವಾಗಿ ಹುಲಿದಾಳಿಯ ಬಳಿಕ ಜಿಲ್ಲೆಗೆ ಆಗಮಿಸುವಲ್ಲಿ ವಿಳಂಬಕ್ಕಾಗಿ ಕಣಿಯಾರಂ ಬಳಿ ಅವರ ವಾಹನಗಳ ಸಾಲು ಸಾಗುತ್ತಿದ್ದಾಗ ಕಪ್ಪು ಬಾವುಟಗಳನ್ನು ಪ್ರದರ್ಶಿಸಲಾಯಿತು. ‘ವಾಪಸ್ ಹೋಗಿ’ ಎಂಬ ಘೋಷಣೆಗಳನ್ನೂ ಸಿಪಿಎಂ ಕಾರ್ಯಕರ್ತರು ಕೂಗಿದರು.

ಪ್ರಿಯಾಂಕಾ ಅಪರಾಹ್ನ ಹತ ಮಹಿಳೆ ರಾಧಾರ ಮನೆಯನ್ನು ತಲುಪಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜ.24ರಂದು ರಾಧಾ ಮಾನಂದವಾಡಿಯ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಕೋಡುಗಳನ್ನು ಸಂಗ್ರಹಿಸುತ್ತಿದ್ದಾಗ ಹುಲಿಯ ಬಾಯಿಗೆ ಬಲಿಯಾಗಿದ್ದರು.

ನರಭಕ್ಷಕ ಹುಲಿಯ ಕಳೇಬರವು ಸೋಮವಾರ ಪತ್ತೆಯಾಗಿದ್ದು,ಮರಣೋತ್ತರ ಪರೀಕ್ಷೆ ವೇಳೆ ಅದರ ಹೊಟ್ಟೆಯಲ್ಲಿ ರಾಧಾರ ಕೂದಲು,ಬಟ್ಟೆ ಮತ್ತು ಕಿವಿಯೋಲೆಗಳು ಪತ್ತೆಯಾಗಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

ಹುಲಿಯ ಕುತ್ತಿಗೆಯಲ್ಲಿ ಹೊಸದಾಗಿ ಆಳವಾದ ಗಾಯಗಳಾಗಿದ್ದು, ಇದು ಅದರ ಸಾವಿಗೆ ಕಾರಣವಾಗಿದೆ ಎನ್ನುವುದನ್ನು ಮರಣೋತ್ತರ ಪರೀಕ್ಷೆ ವರದಿಯು ದೃಢಪಡಿಸಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News