ಮಣಿಪುರ | ಪರಿಹಾರ ಶಿಬಿರದಲ್ಲಿ 9 ವರ್ಷದ ಬಾಲಕಿಯ ಮೃತದೇಹ ಪತ್ತೆ
Update: 2025-03-21 15:47 IST

ಸಾಂದರ್ಭಿಕ ಚಿತ್ರ (PTI)
ಇಂಫಾಲ್: ಮಣಿಪುರದ ಚುರಚಂದಪುರ ಜಿಲ್ಲೆಯ ಪರಿಹಾರ ಶಿಬಿರದಲ್ಲಿ ಶುಕ್ರವಾರ ಮುಂಜಾನೆ 9 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಗುರುವಾರ ಸಂಜೆ ಪರಿಹಾರ ಶಿಬಿರದಿಂದ ಬಾಲಕಿ ನಾಪತ್ತೆಯಾಗಿದ್ದಾಳೆ. ಆ ಬಳಿಕ ಆಕೆಯ ಕುಟುಂಬವು ಹುಡುಕಾಟ ನಡೆಸಿದೆ. ರಾತ್ರಿಯ ವೇಳೆ ಬಾಲಕಿಯ ಮೃತದೇಹ ಪರಿಹಾರ ಶಿಬಿರದ ಬಳಿ ಪತ್ತೆಯಾಗಿದೆ.
ಬಾಲಕಿಯ ಗಂಟಲು ಸೇರಿದಂತೆ ದೇಹದ ಭಾಗಗಳಲ್ಲಿ ಗಾಯದ ಗುರುತುಗಳು ಮತ್ತು ರಕ್ತದ ಕಲೆಗಳು ಕಂಡು ಬಂದಿದೆ. ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ಇದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.