ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ನೌಕರನ ಮೇಲೆ ಶಾಸಕನಿಂದ ಹಲ್ಲೆ : ವೀಡಿಯೊ ವೈರಲ್

Update: 2025-03-22 21:30 IST
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ನೌಕರನ ಮೇಲೆ ಶಾಸಕನಿಂದ ಹಲ್ಲೆ : ವೀಡಿಯೊ ವೈರಲ್
Photo | viral video/screengrab
  • whatsapp icon

ಅಸ್ಸಾಂ : ಬಿಲಾಸಿಪಾರಾದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ರಸ್ತೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ರಿಬ್ಬನ್ ಬದಲಿಗೆ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ಎಐಯುಡಿಎಫ್ ಶಾಸಕ ಸಂಸುಲ್ ಹುದಾ ಬಾಳೆ ಗಿಡದಿಂದ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ವೈರಲ್ ಆಗುತ್ತಿದ್ದಂತೆ ಶಾಸಕರ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.

ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಿದ ಶಾಸಕ ಸಂಸುಲ್ ಹುದಾ ರಿಬ್ಬನ್ ಬಣ್ಣವನ್ನು ಗಮನಿಸಿ ಗುತ್ತಿಗೆ ಸಿಬ್ಬಂದಿ ಸಾಹಿದುರ್ ರೆಹಮಾನ್‌ಗೆ ತರಾಟೆಗೆ ತೆಗೆದುಕೊಂಡು ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದರು. ಬಳಿಕ ಬಾಳೆ ಗಿಡದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಬಿಲಾಸಿಪಾರಾ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಶಾಸಕರ ದರ್ಪದ ವೀಡಿಯೊ ವೈರಲ್‌ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜನಪ್ರತಿನಿಧಿಗಳ ನಡವಳಿಕೆ ಮತ್ತು ಅವರ ಅಧಿಕಾರದ ದುರುಪಯೋಗದ ಬಗ್ಗೆ ಹಲವರು ಕಳವಳವನ್ನು ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಹುಡಾ ಕ್ಷಮೆಯಾಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News