ಕೇರಳ: ಬೆಂಗಳೂರಿನಿಂದ ಎಂಡಿಎಂಎ ಸಾಗಿಸುತ್ತಿದ್ದ ಮಹಿಳೆಯ ಬಂಧನ

ಸಾಂದರ್ಭಿಕ ಚಿತ್ರ
ಕೊಲ್ಲಂ: ಬೆಂಗಳೂರಿನಿಂದ ಹಲವು ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಮಾದಕ ವಸ್ತು ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ 34 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶಕ್ತಿಕುಲಂಗರಾ ಪೊಲೀಸರು ಹಾಗೂ ಕೊಲ್ಲಂ ನಗರ ಪೊಲೀಸ್ ಜಿಲ್ಲಾ ಮಾದಕ ವಸ್ತು ವಿರೋಧಿ ವಿಶೇಷ ಕಾರ್ಯ ಪಡೆ (ಡಿಎಎನ್ಎಸ್ಎಫ್) ಅಂಚಲುಮ್ಮೂಡು ನಿವಾಸಿಯಾಗಿರುವ ಅನಿಲಾ ರವೀಂದ್ರನ್ ರನ್ನು ಶುಕ್ರವಾರ ಸಂಜೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅನಿಲಾ ರವೀಂದ್ರನ್ ಬೆಂಗಳೂರಿನಿಂದ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಪೊಲೀಸರು ನೀಂದಕರ ಸೇತುವೆಯ ಸಮೀಪ ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ಚಾಲಕ ಪರಾರಿಯಾಗಲು ಪ್ರಯತ್ನಿಸಿದ. ಆದುದರಿಂದ ಕಾರನ್ನು ಬೆನ್ನಟ್ಟಿ ನಿಲ್ಲಿಸಲಾಯಿತು ಹಾಗೂ 90 ಗ್ರಾಂ ಎಂಡಿಎಂ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು 50 ಗ್ರಾಂ ಎಂಡಿಎಂಎ ಕಾರಿನಲ್ಲಿ ಪತ್ತೆಯಾಯಿತು. ಬಳಿಕ ಮಹಿಳೆಯನ್ನು ವೈದ್ಯಕೀಯ ಪರಿಶೀಲನೆ ನಡೆಸಲಾಯಿತು. ಆಗ, ಸುಮಾರು 40 ಗ್ರಾಂ ಎಂಡಿಎಂಎ ಆಕೆಯ ಗುಪ್ತಾಂಗದಲ್ಲಿ ಅಡಗಿಸಿ ಇರಿಸಿರುವುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯಿಂದ ವಶಪಡಿಸಿಕೊಳ್ಳಲಾದ ಎಂಡಿಎಂಎಯ ನಿಖರ ಪ್ರಮಾಣವನ್ನು ಇನ್ನಷ್ಟೇ ನಿರ್ಧರಿಸಬೇಕು. ಅದು ಒಟ್ಟು ಸುಮಾರು 90 ಗ್ರಾಂ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊಲ್ಲಂ ನಗರದ ಶಾಲೆ ಹಾಗೂ ಕಾಲೇಜುಗಳಿಗೆ ಪೂರೈಸಲು ಈಕೆ ಎಂಡಿಎಂಎಯನ್ನು ಅಕ್ರಮ ಸಾಗಾಟ ಮಾಡುತ್ತಿದ್ದಳು ಎಂದು ಅವರು ಹೇಳಿದ್ದಾರೆ. ಆಕೆ ಪ್ರಯಾಣಿಸುತ್ತಿದ್ದ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.