ಕರಾಟೆ ದಂತಕಥೆ, ನಟ ಶಿಹಾನ್ ಹುಸೇನಿ ನಿಧನ

Update: 2025-03-25 14:05 IST
ಕರಾಟೆ ದಂತಕಥೆ, ನಟ ಶಿಹಾನ್ ಹುಸೇನಿ ನಿಧನ

Photo | hindustantimes

  • whatsapp icon

ಹೊಸದಿಲ್ಲಿ : ತಮಿಳು ನಟ, ಕರಾಟೆ ದಂತಕಥೆ ಶಿಹಾನ್ ಹುಸೇನಿ ಅವರು ಬ್ಲಡ್ ಕ್ಯಾನ್ಸರ್‌ನಿಂದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಸೆಂಟ್ ನಗರದ ನಿವಾಸದಲ್ಲಿ ಶಿಹಾನ್ ಹುಸೇನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

ಹುಸೇನಿ ಅವರಿಗೆ ಇತ್ತೀಚೆಗೆ ಲ್ಯುಕೇಮಿಯಾ ಇರುವುದು ಪತ್ತೆಯಾಗಿತ್ತು. ಈ ತಿಂಗಳ ಆರಂಭದಲ್ಲಿ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಶಿಹಾನ್, ತನ್ನ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. 

ಕರಾಟೆ ತರಬೇತುದಾರರಾಗಿ ಹುಸೇನಿ ಖ್ಯಾತಿಯನ್ನು ಪಡೆದಿದ್ದರು. ಕೆ. ಬಾಲಚಂದರ್ ಅವರ ಪುಂಗನಿ ಮನ್ನನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿಹಾನ್ ಹುಸೇನಿ, ವಿಜಯ್ ಅವರ ಬದ್ರಿ ಚಿತ್ರದಲ್ಲಿ ಕರಾಟೆ ಪಟುವಿನ ಪಾತ್ರವನ್ನು ನಿರ್ವಹಿಸಿದರು. ಹುಸೇನಿ ಅವರು ಬ್ಲಡ್ಸ್ಟೋನ್, ಉನ್ನೈ ಸೊಲ್ಲಿ ಕುಟ್ರಮಿಲ್ಲೈ, ಕಾತುವಾಕುಲಾ ರೆಂಡು ಕಾದಲ್, ಚೆನ್ನೈ ಸಿಟಿ ಗ್ಯಾಂಗ್ಸ್ಟರ್ಸ್ ಮತ್ತು ವೇದನ್ ಚಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News