ಚರ್ಮದ ಬಣ್ಣ ʼಕಪ್ಪುʼ ಎಂದು ತಾರತಮ್ಯ : ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಆರೋಪ

Update: 2025-03-26 19:41 IST
ಚರ್ಮದ ಬಣ್ಣ ʼಕಪ್ಪುʼ ಎಂದು ತಾರತಮ್ಯ : ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಆರೋಪ

Photo | Facebook

  • whatsapp icon

ತಿರುವನಂತಪುರಂ : ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರು ತಮ್ಮ ಚರ್ಮದ ಬಣ್ಣ ಮತ್ತು ಲಿಂಗದ ಕಾರಣದಿಂದ ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಬಹಿರಂಗ ಪೋಸ್ಟ್ ಮಾಡಿದ್ದು, ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. 

ಕೇರಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ.ವಿ.ವೇಣು ಅವರ ಅಧಿಕಾರವಧಿ ಕೊನೆಗೊಳ್ಳುತ್ತಿದ್ದಂತೆ ಶಾರದಾ ಮುರಳೀಧರನ್ ಅವರನ್ನು ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. 

ಫೇಸ್ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ ಶಾರದಾ ಮುರಳೀಧರನ್, ಇದೀಗ ನಮ್ಮ ಹುದ್ದೆಯನ್ನು ಕೂಡ ನನ್ನ ಪತಿಯ ಬಿಳಿ ಬಣ್ಣ ಹಾಗೂ ನನ್ನ ಕಪ್ಪು ಬಣ್ಣದೊಂದಿಗೆ ಹೋಲಿಕೆ ಮಾಡಲಾಗಿತ್ತು ಎಂದು ಹೇಳಿದರು. ʼನಾನು ಕಪ್ಪು, ನನ್ನ ಪತಿ ಬಿಳಿಯಾಗಿದ್ದರಂತೆ ʼಎಂದು ಕೆಲವರು ಕಮೆಂಟ್ ಮಾಡಿದರು ಎಂದು ಅವರು ಬರೆದುಕೊಂಡಿದ್ದಾರೆ.

ಆ ಹೇಳಿಕೆಯಿಂದ ನೋವಾಯಿತು ಎಂದು ಫೇಸ್ಬುಕ್ ಪೋಸ್ಟ್‌ನಲ್ಲಿ ಅವರು ಬರೆದುಕೊಂಡಿದ್ದರು. ವ್ಯಾಪಕ ಪ್ರತಿಕ್ರಿಯೆ ಬಳಿಕ ಅವರು ಪೋಸ್ಟ್‌ನ್ನು ಅಳಿಸಿ ಹಾಕಿದರು. ಆದರೆ ಇದು ಚರ್ಚೆ ಮಾಡಬಲ್ಲ ವಿಷಯ ಎಂದು ಹಲವರು ಹೇಳಿದ ಬಳಿಕ ಅವರು  ಪೋಸ್ಟ್‌ನ್ನು ಮರು ಹಂಚಿಕೊಂಡರು.  ಆ ಪೋಸ್ಟ್ ಸಾವಿರಾರು ಪೋಸ್ಟ್, ಕಮೆಂಟ್‌ಗಳನ್ನು ಸ್ವೀಕರಿಸಿದೆ.  

ಶಾರದಾ ಮುರಳೀಧರನ್ ಅವರ ಪೋಸ್ಟ್ ಲಿಂಗ ಮತ್ತು ಜನಾಂಗೀಯ ಪಕ್ಷಪಾತದ ಬಗ್ಗೆ ಭಾರಿ ಚರ್ಚೆಗೆ ಕಾರಣವಾಯಿತು, ಅವರಿಗೆ ಹಲವರು ಬೆಂಬಲವನ್ನು ವ್ಯಕ್ತಪಡಿಸಿದರು.  

ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರು ಕಪ್ಪು ಎಂದು ಲೇಬಲ್ ಮಾಡುವುದರ ವಿರುದ್ಧ ಧ್ವನಿ ಎತ್ತಿದ್ದಾರೆ. ವಾಸ್ತವದಲ್ಲಿ ಅದು ವಿಶ್ವದ ಸರ್ವವ್ಯಾಪಿ ಸತ್ಯ ಆಗಿರುವಾಗ ಬಣ್ಣವನ್ನು ಏಕೆ ಕೀಳಾಗಿ ಬಿಂಬಿಸಲಾಗುತ್ತದೆ ಎಂದು ಪ್ರಶ್ನಿಸಿದರು. ಕಪ್ಪು ಬಣ್ಣ ಮಾತ್ರವಲ್ಲ, ಕಪ್ಪು ಎಂದರೆ ಒಳ್ಳೆಯದಲ್ಲ, ಕಪ್ಪು ಬಣ್ಣವನ್ನು ಏಕೆ ನಿಂದಿಸಬೇಕು? ಕಪ್ಪು ಬಣ್ಣವು ಇತರ ಬಣ್ಣಗಳಷ್ಟೇ ಸುಂದರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕಪ್ಪು ಬಣ್ಣವನ್ನು ಏಕೆ ದೂಷಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ಕಪ್ಪು ಬಣ್ಣವು ವಿಶ್ವದ ಸರ್ವವ್ಯಾಪಿ ಸತ್ಯ ಆಗಿರುವಾಗ ಅದನ್ನು ನಿಂದಿಸುವುದು ಏಕೆ? ಕಪ್ಪು ಯಾವುದನ್ನಾದರೂ ಹೀರಿಕೊಳ್ಳಬಲ್ಲದು, ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಶಕ್ತಿಶಾಲಿ ಶಕ್ತಿಯ ನಾಡಿಮಿಡಿತವಿದು. ಯಾವುದೇ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿ ಧರಿಸುವ ಕೋಟ್ ಕೂಡ ಕಪ್ಪು ಬಣ್ಣದ್ದು, ಆದರೂ ಜನರಿಗೆ ಕಪ್ಪು ಬಣ್ಣದ ಬಗ್ಗೆ ತಾತ್ಸಾರ ಯಾಕೆ ಎಂದು ಪ್ರಶ್ನಿಸಿದ್ದಾರೆ.

ನಾನು 4 ವರ್ಷದವಳಿದ್ದಾಗ ನನ್ನ ಅಮ್ಮನ ಬಳಿ ಕೇಳಿದ್ದೆ ನೀನು ಪುನಃ ನನ್ನನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು, ಸುಂದರ ಬಿಳಿ ಇರುವ ಮಗುವಾಗಿ ಹೊರ ತರಲು ಸಾಧ್ಯವೇ ಎಂದು ಕೇಳಿದ್ದೆ ಎಂಬ ಅವರ ಬಾಲ್ಯದ ನೆನಪನ್ನು ಈ ಬರಹದಲ್ಲಿ ಸೇರಿಸಿದ್ದಾರೆ. 

ನಾನು ನನ್ನ ಬದುಕಿನ ಉದ್ದಕ್ಕೂ ಕಪ್ಪು ಎನ್ನುವ ಕಾರಣಕ್ಕೆ ಸಂಕಷ್ಟಗಳನ್ನು ಎದುರಿಸಿದ್ದೇನೆ. 50 ವರ್ಷಗಳ ನನ್ನ ಬದುಕಿನಲ್ಲಿ ಕಪ್ಪು ಬಣ್ಣದ ಕಾರಣಕ್ಕೆ ನಾನು ಎದುರಿಸಿದ ಕೀಳರಿಮೆಗಳು ಹಲವು. ಆದರೆ, ನನ್ನ ಮಕ್ಕಳು ನನ್ನ ದೃಷ್ಟಿಕೋನವನ್ನು ಬದಲಿಸಿದರು. ಕಪ್ಪು ಸುಂದರ ಎಂಬುದನ್ನು ಅವರು ನನಗೆ ಅರ್ಥ ಮಾಡಿಸಿದರು. ಅಂದಿನಿಂದ ನನಗೆ ಅರ್ಥವಾಗಿತ್ತು, ಕಪ್ಪು ನಿಜಕ್ಕೂ ಸುಂದರ, ಕಪ್ಪು ಅದ್ಭುತ ಎಂದು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News