ಮೋದಿಯನ್ನು ಅದಾನಿ, ಅಂಬಾನಿಗೆ ಸಹಾಯ ಮಾಡಲು ಪರಮಾತ್ಮ ಕಳಿಸಿದರೇ?: ರಾಹುಲ್‌ ಗಾಂಧಿ ವ್ಯಂಗ್ಯ

Update: 2024-05-29 06:23 GMT

 ರಾಹುಲ್ ಗಾಂಧಿ (Photo: X \ @INCIndia)

ಲಕ್ನೋ: ಪರಮಾತ್ಮನೇ ನನ್ನನ್ನು ಕಳಿಸಿರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ. “ನರೇಂದ್ರ ಮೋದಿಯ ಪರಮಾತ್ಮ ಅವರಿಗೆ ಕೇವಲ ಅದಾನಿ ಮತ್ತು ಅಂಬಾನಿಗೆ ಸಹಾಯ ಮಾಡಲು ಹೇಳಿದ್ದರೇ” ಎಂದು ಪ್ರಶ್ನಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಜೊತೆಗೆ ಬಾನಸ್‌ಗಾವ್‌ ಕ್ಷೇತ್ರದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ರಾಹುಲ್‌ ಮಾತನಾಡುತ್ತಿದ್ದರು. “ಮೋದಿಯನ್ನು ನಿಜವಾಗಿಯೂ ಪರಮಾತ್ಮ ಕಳಿಸಿದ್ದರೆ ಅವರನ್ನ ಬಡವರಿಗಾಗಿ ಕೆಲಸ ಮಾಡಲು ಕಳಿಸುತ್ತಿದ್ದರು,” ಎಂದು ಅವರು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪ್ರಧಾನಿ ಮೋದಿ ಜವಾಬ್ದಾರರು ಎಂದು ರಾಹುಲ್‌ ಹೇಳಿದರು.

ಇಂಡಿಯಾ ಮೈತ್ರಿಕೂಟವು ದೇಶದ ಸಂವಿಧಾನವನ್ನು “ದಿಲ್‌ ಸೇ, ಜಾನ್‌ ಸೇ, ಖೂನ್‌ ಸೇ ರಕ್ಷಾ ಕರ್ನೇ ಕಾ ಕಾಮ್‌ ಕರೇಗಾ,” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News