ರಾಜ್ಯಸಭೆ ಉಪಚುನಾವಣೆ | ಬಿಜೆಪಿಯ ರೇಖಾ ಶರ್ಮಾ ನಾಮಪತ್ರ ಸಲ್ಲಿಕೆ

Update: 2024-12-10 22:12 IST
Rekha Sharma

ರೇಖಾ ಶರ್ಮಾ | PC : PTI 

  • whatsapp icon

ಚಂಡಿಗಡ : ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ಅಭ್ಯರ್ಥಿ ರೇಖಾ ಶರ್ಮಾ ಅವರು ಹರ್ಯಾಣದಿಂದ ರಾಜ್ಯಸಭಾ ಉಪಚುನಾವಣೆಗಾಗಿ ಮಂಗಳವಾರ ಇಲ್ಲಿ ತನ್ನ ನಾಮಪತ್ರವನ್ನು ಸಲ್ಲಿಸಿದರು.

ಶರ್ಮಾ ಕಣದಲ್ಲಿರುವ ಏಕೈಕ ಅಭ್ಯರ್ಥಿಯಾಗಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಡಿ.20ರಂದು ರಾಜ್ಯಸಭಾ ಉಪಚುನಾವಣೆ ನಡೆಯಲಿದ್ದು,ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಪ್ರತಿಪಕ್ಷವು ನಿರ್ಧರಿಸಿದೆ. ಬಿಜೆಪಿಯ ಕೃಷ್ಣಲಾಲ ಪನ್ವರ್ ಅವರು ಕಳೆದ ಅಕ್ಟೋಬರ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರಿಂದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾದ ಸ್ಥಾನಕ್ಕಾಗಿ ಉಪಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News