ಸಂಸತ್ತಿನಲ್ಲಿ ಇರುವಂತೆ ಪ್ರಧಾನಿಗೆ ನಿರ್ದೇಶಿಸಲು ತನಗೆ ಸಾಧ್ಯವಿಲ್ಲ: ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್

Update: 2023-08-02 12:34 GMT

ಹೊಸದಿಲ್ಲಿ: ಮಣಿಪುರದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಬೇಕೆಂದು ಪ್ರತಿಪಕ್ಷಗಳು ಬೇಡಿಕೆಯನ್ನು ಎತ್ತುತ್ತಲೇ ಇದ್ದರೂ, ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರು “ಮೋದಿಯನ್ನು ಸದನದಲ್ಲಿ ಇರುವಂತೆ ನಿರ್ದೇಶಿಸಲು ತನಗೆ ಸಾಧ್ಯವಿಲ್ಲ, ತಾನು ಹಾಗೆ ಮಾಡುವುದಿಲ್ಲ” ಎಂದು ಹೇಳಿದರು. ಯಾವುದೇ ಇತರ ಸಂಸದರಂತೆ ಸದನಕ್ಕೆ ಬರುವುದು ಪ್ರಧಾನಿಯವರ ವಿಶೇಷಾಧಿಕಾರ ಎಂದು ಅವರು ಹೇಳಿದ್ದಾರೆ. ಬಳಿಕ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿವೆ.

ಮಣಿಪುರದ ಹಿಂಸಾಚಾರ ಮತ್ತು ಅಶಾಂತಿಯ ಕುರಿತು ಅಧ್ಯಕ್ಷರ ಒಪ್ಪಿಗೆಯೊಂದಿಗೆ ಚರ್ಚೆಗೆ ಅವಕಾಶ ನೀಡುವ ನಿಯಮ 267 ರ ಅಡಿಯಲ್ಲಿ 58 ನೋಟೀಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಜುಲೈ 20 ರಂದು ನಿಯಮ 167 ರ ಅಡಿಯಲ್ಲಿ ಈ ವಿಷಯದ ಕುರಿತು ಅಲ್ಪಾವಧಿಯ ಚರ್ಚೆಯನ್ನು ಈಗಾಗಲೇ ಸ್ವೀಕರಿಸಿರುವುದರಿಂದ ಈ ಸೂಚನೆಗಳನ್ನು ಅಂಗೀಕರಿಸಲಾಗಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಕಳೆದ ಹಲವು ವಾರಗಳಿಂದ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News