ರ‍್ಯಾಂಜಿನೇವಾ ಓಪನ್| ಭಾರತದ ಅಗ್ರ ರ್‍ಯಾಂಕಿನ ಟೆನಿಸ್ ತಾರೆ ಸುಮಿತ್ ನಾಗಲ್ ಮೊದಲ ಸುತ್ತಿನಲ್ಲಿ ನಿರ್ ಗಮನ

Update: 2024-05-20 17:13 GMT

ಸುಮಿತ್ ನಾಗಲ್ (PTI)

ಹೊಸದಿಲ್ಲಿ: ಭಾರತದ ಅಗ್ರ ರ್‍ಯಾಂಕಿನ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಜಿನೇವಾ ಓಪನ್ ನಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರಾಶೆಗೊಳಿಸಿದ್ದಾರೆ.

ವಿಶ್ವದ ನಂ.94ನೇ ಆಟಗಾರ ನಾಗಲ್ ರವಿವಾರ ಒಂದು ಗಂಟೆ ಹಾಗೂ 52 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನಲ್ಲಿ ಪಂದ್ಯದಲ್ಲಿ ಅರ್ಜೆಂಟೀನದ ಕ್ಲೇ ಕೋರ್ಟ್ ಸ್ಪೆಷಲಿಸ್ಟ್ ಸೆಬಾಸ್ಟಿಯನ್ ಬಾಯೆಝ್ ವಿರುದ್ಧ 6-7(7), 3-6 ಸೆಟ್ ಗಳ ಅಂತರದಿಂದ ಸೋತಿದ್ದಾರೆ.

ಇಂದು ದಿಟ್ಟ ಹೋರಾಟ ನೀಡಿದರೂ ಸೋಲು ಎದುರಾಯಿತು. ಆದರೆ ಇದು ಮುಂಬರುವ ಫ್ರೆಂಚ್ ಓಪನ್ ಟೂರ್ನಿಗಿಂತ ಮೊದಲು ಉತ್ತಮ ತಯಾರಿಯಾಗಿದೆ ಎಂದು ಫ್ರೆಂಚ್ ಓಪನ್ ನಲ್ಲಿ ಸ್ಥಾನ ಪಡೆದಿರುವ ನಾಗಲ್ ಸೋತ ನಂತರ ಟ್ವೀಟಿಸಿದ್ದಾರೆ.

ನಾಗಲ್ 4-1 ಆರಂಭಿಕ ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿದ್ದರು. ಆದರೆ ವಿಶ್ವದ ನಂ.19ನೇ ಆಗಾರ ಸೆಬಾಸ್ಟಿಯನ್ ತನ್ನ ಪರಾಕ್ರಮ ಪ್ರದರ್ಶಿಸಿ ಮೊದಲ ಸೆಟನ್ನು ಟೈ-ಬ್ರೇಕರ್ಗೆ ಒಯ್ದರು. ಈ ಋತುವಿನಲ್ಲಿ ಈಗಾಗಲೇ ಆವೆಮಣ್ಣಿನ ಅಂಗಣದಲ್ಲಿ ಎರಡು ಪ್ರಶಸ್ತಿಗಳನ್ನು ಜಯಿಸಿರುವ ಸೆಬಾಸ್ಟಿಯನ್ ಎರಡನೇ ಸೆಟ್ ಅನ್ನು 6-3 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News