ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
Update: 2025-02-22 21:26 IST

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಒಂದೂವರೆ ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಹೊಸದಿಲ್ಲಿಯ ನ್ಯಾಯಾಲಯವೊಂದು ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
2019ರಲ್ಲಿ ನಡೆದ ಅಪರಾಧದಲ್ಲಿ ಆರೋಪಿಯು ಪೋಕ್ಸೊ ಕಾಯ್ದೆಯಡಿಯಲ್ಲಿ ದೋಷಿಯಾಗಿದ್ದಾನೆ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಮನೋಜ್ ಕುಮಾರ್ ಕಳೆದ ವರ್ಷದ ಡಿಸೆಂಬರ್ ನಲ್ಲಿ ತೀರ್ಪು ನೀಡಿದ್ದರು.
‘‘ಮಕ್ಕಳ ಮೇಲೆ ದಾಳಿ ಮಾಡುವ ಅತ್ಯಾಚಾರಿಗಳನ್ನು ಸಮಾಜವು ಅಸಹ್ಯದಿಂದ ನೋಡುತ್ತದೆ ಎನ್ನುವುದನ್ನು ನ್ಯಾಯಾಲಯಗಳ ತೀರ್ಪುಗಳು ಪ್ರತಿಬಿಂಬಿಸುತ್ತವೆ’’ ಎಂದು ಜನವರಿ 15ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು ಆರೋಪಿಗೆ ಪೋಕ್ಸೊ ಕಾಯ್ದೆಯ ಪರಿಚ್ಛೇದ 6ರಡಿ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಜೊತೆಗೆ, ಅಪಹರಣಕ್ಕಾಗಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಎರಡೂ ಶಿಕ್ಷೆಗಳು ಜೊತೆಯಾಗಿ ಸಾಗುತ್ತವೆ.