ಕಾಂಗ್ರೆಸ್ | ಜಿಲ್ಲಾ ಚುನಾವಣೆಗೆ ವೀಕ್ಷಕರ ನೇಮಕ; ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ನಾಲ್ವರಿಗೆ ಅವಕಾಶ
Update: 2025-04-13 00:10 IST

ಬಿ.ಕೆ. ಹರಿಪ್ರಸಾದ್
ಹೊಸದಿಲ್ಲಿ: ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಹೊಂದಿರುವ 43 ಎಐಸಿಸಿ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ವೀಕ್ಷಕರಲ್ಲಿ ರಾಜ್ಯದ ಬಿ.ಕೆ. ಹರಿಪ್ರಸಾದ್, ಬಿ.ಎಂ. ಸಂದೀಪ್, ಸೂರಜ್ ಹೆಗ್ಡೆ ಮತ್ತು ಬಿ.ವಿ. ಶ್ರೀನಿವಾಸ್ ಅವರಿಗೆ ಸ್ಥಾನ ನೀಡಲಾಗಿದೆ.
ಎಐಸಿಸಿ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಜಿಲ್ಲಾ ಸಮಿತಿಗಳ ಪುನರ್ರಚನೆಯ ಪ್ರಕ್ರಿಯೆಯನ್ನು ಕಾಂಗ್ರೆಸ್ ಇದೇ 15ರಿಂದ ನಡೆಸಲಿದೆ. ಗುಜರಾತ್ನಲ್ಲಿ ಈ ಪ್ರಕ್ರಿಯೆ ನಡೆಸಲು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿ 43 ಎಐಸಿಸಿ ವೀಕ್ಷಕರು ಹಾಗೂ 183 ಪಿಸಿಸಿ ವೀಕ್ಷಕರನ್ನು ಪಕ್ಷ ಶನಿವಾರ ನೇಮಿಸಿದೆ.
ಕಾಂಗ್ರೆಸ್ ತನ್ನ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ವೀಕ್ಷಕರನ್ನು ನೇಮಿಸುತ್ತಿರುವುದು ಇದೇ ಮೊದಲು.