ರತನ್ ಟಾಟಾ ನಿಧನ | ಗೂಗಲ್ ಸರ್ಚ್ ನಲ್ಲಿ ಟಾಪ್ ಟ್ರೆಂಡಿಂಗ್

Update: 2024-10-10 09:59 GMT

ಮುಂಬೈ: ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ರಾತ್ರಿ ನಿಧನರಾದ ನಂತರ ಗೂಗಲ್ ಸರ್ಚ್ ನಲ್ಲಿ 'ರತನ್ ಟಾಟಾ' ಟಾಪ್ ಟ್ರೆಂಡಿಂಗ್ ನಲ್ಲಿದೆ.

ದೀರ್ಘಕಾಲದ ಅನಾರೋಗ್ಯದ ನಂತರ ರತನ್ ಟಾಟಾ ಬುಧವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

trends.google ಪ್ರಕಾರ, ಕಳೆದ 15 ಗಂಟೆಗಳ ಅವಧಿಯಲ್ಲಿ ರತನ್ ಟಾಟಾ ಅವರ ಬಗ್ಗೆ 5 ದಶಲಕ್ಷಕ್ಕೂ ಹೆಚ್ಚು ಸರ್ಚ್ ಮಾಡಲಾಗಿದೆ. ಅಂದರೆ, ಒಮ್ಮೆಲೇ ಶೇ. 1000 ರಷ್ಟು ಭಾರಿ ಏರಿಕೆ!

ಮುಂಬೈ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿದ್ದ ಟಾಟಾ ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದಾಗಿ ವಾಡಿಕೆಯಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ಟಾಟಾ ಸಮೂಹ ಸೋಮವಾರ ಹೇಳಿತ್ತು.

2000 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ಪಡೆದ ನಂತರ ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ರತನ್ ಅವರು 2008ರಲ್ಲಿ ಪಡೆದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News