‌ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷದ ಕೋರ್ ಕಮಿಟಿಗೆ ಪ್ರಮುಖ ನಾಯಕರಿಬ್ಬರ ರಾಜೀನಾಮೆ

Update: 2024-12-17 17:48 GMT

ಪ್ರಶಾಂತ್ ಕಿಶೋರ್ | PC : PTI

ಪಾಟ್ನಾ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷವು ಗಂಭೀರ ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದು,ಪ್ರಮುಖ ನಾಯಕರಿಬ್ಬರು ಮಂಗಳವಾರ ಪಕ್ಷದ ಕೋರ್ ಕಮಿಟಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನವೇ ಈ ಬೆಳವಣಿಗೆ ನಡೆದಿದ್ದು,ಪಕ್ಷದ ಸ್ಥಿರತೆಯ ಬಗ್ಗೆ ಕಳವಳಗಳನ್ನು ಮೂಡಿಸಿದೆ.

ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ ಯಾದವ ಮತ್ತು ಮಾಜಿ ಸಂಸದ ಎಂ.ಹಸನ್ ಅವರು 125 ಸದಸ್ಯರ ರಾಜ್ಯ ಕೋರ್ ಕಮಿಟಿಯಿಂದ ಹೊರಬಂದಿದ್ದು,ತಮ್ಮ ರಾಜೀನಾಮೆಗೆ ಅನಿವಾರ್ಯ ಕಾರಣಗಳನ್ನು ಉಲ್ಲೇಖಿಸಿದ್ದಾರೆ.

ಈ ರಾಜೀನಾಮೆಗಳು ಪಕ್ಷದಲ್ಲಿ ಹೆಚ್ಚುತ್ತಿರುವ ಅತೃಪ್ತಿಯನ್ನು ಸೂಚಿಸಿದ್ದು, ಚುನಾವಣೆಗೆ ಮುನ್ನ ಪಕ್ಷವನ್ನು ಬಲಗೊಳಿಸಲು ಯತ್ನಿಸುತ್ತಿರುವ ಕಿಶೋರ್‌ಗೆ ಸವಾಲು ಒಡ್ಡಿವೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News