ಚಿಲ್ಲರೆ ಹಣದುಬ್ಬರ ದರ 6 ಶೇ.ಕ್ಕಿಂತ ಕೆಳಗೆ ಇಳಿಕೆ

Update: 2023-10-12 18:28 GMT

ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ: ಈ ವರ್ಷದ ಸೆಪ್ಟಂಬರ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಮೂರು ತಿಂಗಳ ಕನಿಷ್ಠವಾಗಿರುವ 5.02 ಶೇಕಡಕ್ಕೆ ಇಳಿದಿದೆ. ಆಹಾರದ ಬೆಲೆಗಳಲ್ಲಿ ಆಗಿರುವ ಕಡಿತವೇ ಇದಕ್ಕೆ ಕಾರಣವಾಗಿದೆ ಎಂದು ಗುರುವಾರ ಬಿಡುಗಡೆಗೊಳಿಸಲಾಗಿರುವ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಎರಡು ತಿಂಗಳ ಅಂತರದ ಬಳಿಕ 6 ಶೇಕಡದ ಗಡಿಗಿಂತ ಕೆಳಗೆ ಇಳಿದಿದೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು 2022 ಆಗಸ್ಟ್‌ನಲ್ಲಿ 6.83 ಶೇಕಡ ಮತ್ತು ಅದೇ ವರ್ಷದ ಸೆಪ್ಟಂಬರ್‌ನಲ್ಲಿ 7.41 ಶೇಕಡದಷ್ಟಿತ್ತು.

ಈ ವರ್ಷದಲ್ಲಿ ಈ ಹಿಂದಿನ ಕನಿಷ್ಠ ಹಣದುಬ್ಬರ ದರ ಜೂನ್‌ನಲ್ಲಿ ದಾಖಲಾಗಿತ್ತು. ಆಗ ಅದು 4.87 ಶೇ. ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News