ವಿಪಕ್ಷ ಸಂಸದರ ಅಮಾನತು ಆದೇಶಗಳ ಹಿಂತೆಗತ: ಪ್ರಹ್ಲಾದ ಜೋಶಿ

Update: 2024-01-30 17:06 GMT

ಪ್ರಹ್ಲಾದ ಜೋಶಿ | Photo : PTI  

ಹೊಸದಿಲ್ಲಿ : ಸಂಸತ್ ನ ಚಳಿಗಾಲದ ಅಧಿವೇಶದ ಅವಧಿಯಲ್ಲಿ ಸಂಸದರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾಧ್ಯಕ್ಷರನ್ನು ಕೋರಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಮಂಗಳವಾರ ತಿಳಿಸಿದ್ದಾರೆ.

ಸಂಸತ್ನ ಬಜೆಟ್ ಅಧಿವೇಶನದ ಬುಧವಾರ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯ ಬಳಿಕ ಸಚವರು ಈ ವಿಷಯ ತಿಳಿಸಿದ್ದಾರೆ.

‘‘ಚಳಿಗಾಲದ ಅಧಿವೇಶನದಲ್ಲಿ ಮಾಡಲಾದ ಸಂಸದರ ಎಲ್ಲಾ ಅಮಾನತು ಆದೇಶಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಬಗ್ಗೆ ನಾನು ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾಧ್ಯಕ್ಷರ ಜೊತೆಗೂ ಮಾತನಾಡಿರುವೆ. ಕೇಂದ್ರ ಸರಕಾರದ ಪರವಾಗಿಯೂ ನಾನು ಅವರಿಗೆ ಈ ಮನವಿಯನ್ನು ಮಾಡಿದ್ದೇನೆ. ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವುದು ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾಧ್ಯಕ್ಷರ ಅಧಿಕಾರವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಸಂಸದರ ಅಮಾನತನ್ನು ಹಿಂಪಡೆದು, ಅವರು ಸದನಕ್ಕೆ ಬರುವ ಅವಕಾಶನ್ನು ನೀಡುವುದಕ್ಕಾಗಿ ಸಂಬಂಧಪಟ್ಟ ಹಕ್ಕುಬಾಧ್ಯತಾ ಸಮಿತಿಯ ಜೊತೆ ಮಾತುಕತೆ ನಡೆಸುವಂತೆ ಅವರಿಬ್ಬರನ್ನೂ ಕೋರಿದ್ದೇನೆ ’’ ಎಂದು ಜೋಶಿ ತಿಳಿಸಿದ್ದಾರೆ.

ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಧಾನಿ ಸದನದಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಗದ್ದಲವೆಬ್ಪಿಸುವ ಮೂಲಕ ಕಲಾಪಗಳಿಗೆ ಅಡ್ಡಿಪಡಿಸಿದಕ್ಕಾಗಿ ಲೋಕಸಭಾ ಹಾಗೂ ರಾಜ್ಯಸಭಾಗಳ ದಾಖಲೆಯ 146 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News