ರಸ್ತೆ ಅಪಘಾತ: ಬೆಂಗಳೂರಿನಲ್ಲಿ ಎರಡನೇ ಅತಿ ಹೆಚ್ಚು ಸಾವು

Update: 2023-11-01 18:17 GMT
File Photo

ಹೊಸದಿಲ್ಲಿ, ನ.1: ರಾಷ್ಟ್ರಾದ್ಯಂತ 2022ರಲ್ಲಿ  ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಬೆಂಗಳೂರಿನಲ್ಲಿ ದಾಖಲಾರ್ಹ ಎರಡನೇ ಅತ್ಯಧಿಕ ಸಾವು ಸಂಭವಿಸಿದೆ. ಅನಂತರ ದಿಲ್ಲಿಯಲ್ಲಿ ಅತ್ಯಧಿಕ ಸಾವು ಸಂಭವಿಸಿದೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಧಿಕ ಅಪಘಾತ ತಮಿಳುನಾಡಿನಿಂದ ವರದಿಯಾಗಿದೆ. 

ರಸ್ತೆ ಸಾರಿಗೆ ಹಾಗೂ ಹೆದ್ದಾರಿ (ಎಂಒಆರ್‌ಟಿಎಚ್) ಸಚಿವಾಲಯದ ಇತ್ತೀಚೆಗಿನ ವರದಿ ಪ್ರಕಾರ, 2021ರಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ 654 ಸಾವುಗಳಿಗೆ ಹೋಲಿಸಿದರೆ, 2022ರಲ್ಲಿ ಬೆಂಗಳೂರಿನ ಕಿರಿದಾದ ರಸ್ತೆಗಳಲ್ಲಿ ಸಂಭವಿಸಿದ 3,822 ಅಪಘಾತಗಳಲ್ಲಿ 772 ಜನರು ಪ್ರಾಣ ಕಳೆದುಕೊಂಡಿದ್ದಾರೆ.  ಇದಲ್ಲದೆ, ಕಳಪೆ ಸ್ಥಿತಿಯ ಕಾರಣಕ್ಕಾಗಿ ಸಾಮಾನ್ಯವಾಗಿ ಹೆಡ್‌ಲೈನ್ ಆಗುತ್ತಿರುವ ಬೆಂಗಳೂರಿನ ರಸ್ತೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 3,189 ಜನರು ಗಾಯಗೊಂಡಿದ್ದಾರೆ. 

ಈ ನಡುವೆ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನ ಸಂಖ್ಯೆ ಚೆನ್ನೈಯಲ್ಲಿ ಗಮನಾರ್ಹಾ ಶೇ. 49 ಇಳಿಕೆಯಾಗಿದೆ. ರಸ್ತೆ ಅಪಘಾತದಲ್ಲಿ ಚೆನ್ನೈಯಲ್ಲಿ 2021ರಲ್ಲಿ 998 ಸಾವು ಸಂಭವಿಸಿದರೆ, 2022ರಲ್ಲಿ 507 ಸಾವು ಸಂಭವಿಸಿವೆ. ಆದರೆ, ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 2022ರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಇದರ ಒಟ್ಟು ಪ್ರಕರಣಗಳ ಸಂಖ್ಯೆ 64,105. 

ದೇಶಾದ್ಯಂತ 2022ರಲ್ಲಿ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಿಂದ 1,68,491 ಜನರು ಮೃತಪಟ್ಟಿದ್ದಾರೆ ಹಾಗೂ 4,43,366 ಮಂದಿ ಗಾಯಗೊಂಡಿದ್ದಾರೆ. 

ಸೀಟ್ ಬೆಲ್ಟ್ ಧರಿಸಿದ 16,715 ಮಂದಿ ಸಾವು:

2022ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ಇರುವ ಕಾರಣಕ್ಕೆ 16,715ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ಪ್ರಮಾಣದಲ್ಲಿ 8,384 ಚಾಲಕರು ಹಾಗೂ ಉಳಿದ 8,331 ಪ್ರಯಾಣಿಕರು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ. 

ಹೆಲ್ಮೆಟ್ ಹಾಕದ ಕಾರಣಕ್ಕೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50,029. ಇವರಲ್ಲಿ 35,692 ಮಂದಿ ದ್ವಿಚಕ್ರ ವಾಹನ ಚಾಲಕರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News