ರೋಹಿತ್, ವಿರಾಟ್ ಕೊಹ್ಲಿ ಇನ್ನಷ್ಟು ವರ್ಷ ಆಡಬಹುದು : ಹರ್ಭಜನ್ ಸಿಂಗ್

Update: 2024-08-12 22:12 IST
ರೋಹಿತ್, ವಿರಾಟ್ ಕೊಹ್ಲಿ ಇನ್ನಷ್ಟು ವರ್ಷ ಆಡಬಹುದು : ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್,  ರೋಹಿತ್, ವಿರಾಟ್ ಕೊಹ್ಲಿ  | PTI

  • whatsapp icon

ಹೊಸದಿಲ್ಲಿ : ವಿರಾಟ್ ಕೊಹ್ಲಿ ತಮ್ಮ ಅತ್ಯುನ್ನತ ಫಿಟ್ನೆಸ್‌ ನೊಂದಿಗೆ ಇನ್ನೂ ಐದು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯಬಹುದು. ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಕನಿಷ್ಠ ಒಂದೆರಡು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಉಳಿಯಲಿದ್ದಾರೆ ಎಂದು ಭಾರತದ ಮಾಜಿ ದಿಗ್ಗಜ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಸುಲಭವಾಗಿ ಇನ್ನೂ ಎರಡು ವರ್ಷಗಳ ಕಾಲ ಆಡಬಹುದು. ವಿರಾಟ್ ಕೊಹ್ಲಿಯವರ ದೈಹಿಕ ಕ್ಷಮತೆಯ ಬಗ್ಗೆ ಗೊತ್ತಿಲ್ಲ. ಅವರು ಐದು ವರ್ಷಗಳ ಕಾಲ ಆಡುವುದನ್ನು ನೋಡಬಹುದು. ಕೊಹ್ಲಿ ಅವರು ತಂಡದಲ್ಲಿರುವ ಫಿಟ್ ಇರುವ ಆಟಗಾರನಾಗಿದ್ದಾರೆ ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹರ್ಭಜನ್ ಹೇಳಿದ್ದಾರೆ.

ನನ್ನ ಪ್ರಕಾರ ವಿರಾಟ್ ಹಾಗೂ ರೋಹಿತ್ ಬಳಿ ಸಾಕಷ್ಟು ಕ್ರಿಕೆಟ್ ಬಾಕಿ ಇದೆ. ಕ್ರಿಕೆಟ್‌ ನಲ್ಲಿ ಮುಂದುವರಿಯುವುದು ಅವರಿಗೆ ಬಿಟ್ಟ ವಿಚಾರ. ಒಂದು ವೇಳೆ ಅವರು ಫಿಟ್ ಇದ್ದು ಉತ್ತಮವಾಗಿ ಆಡಿದರೆ ತಂಡವು ಗೆಲ್ಲಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಪಡೆದಿರುವ ಹರ್ಭಜನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News