ಮಾನಹಾನಿಕರ ಲೇಖನ: ANI ಸುದ್ದಿಸಂಸ್ಥೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ ಸಲ್ಮಾನ್ ಖಾನ್

Update: 2024-09-20 10:49 GMT

ಸಲ್ಮಾನ್‌ ಖಾನ್‌ (Photo: PTI)

ಹೊಸದಿಲ್ಲಿ: ತನ್ನ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದಕ್ಕೆ ಕ್ಷಮೆಯಾಚಿಸುವಂತೆ ANI ಸುದ್ದಿಸಂಸ್ಥೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಗ್ರಹಿಸಿದ್ದಾರೆ.

ಸೆ. 4ರಂದು ANI ತನ್ನ ಬಗ್ಗೆ ಪ್ರಕಟಿಸಿದ್ದ ಲೇಖನಕ್ಕೆ ಸಲ್ಮಾನ್ ಖಾನ್ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಲೇಖನ ವಕೀಲ ಅಮಿತ್ ಮಿಶ್ರಾ ಅವರ ಸಂದರ್ಶನವನ್ನು ಒಳಗೊಂಡಿತ್ತು. ಫೈರಿಂಗ್ ಪ್ರಕರಣದ ಆರೋಪಿಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಮಿಶ್ರಾ ಪ್ರತಿನಿಧಿಸುತ್ತಿದ್ದರು.

ತನ್ನ ಮನೆಯ ಹೊರೆಗೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಇಬ್ಬರು ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿದ್ದ ವಕೀಲ ಮಿಶ್ರಾ ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ಸಲ್ಮಾನ್ ಖಾನ್ ಆರೋಪಿಸಿದ್ದಾರೆ.

ಮಿಶ್ರಾ ಅವರ ಸಂದರ್ಶನವನ್ನು ಪ್ರಕಟಿಸುವ ಮೂಲಕ ಎಎನ್ಐ ಸುಳ್ಳು ಮತ್ತು ಮಾನಹಾನಿಕರ ಮಾಹಿತಿಯನ್ನು ಹರಡಿದೆ ಎಂದು ಖಾನ್ ಆರೋಪಿಸಿದ್ದಾರೆ.

ಈ ಬಗ್ಗೆ 48 ಗಂಟೆಗಳ ಒಳಗೆ ಎಎನ್ಐ ಮತ್ತು ಮಿಶ್ರಾ ಪ್ರಕರಣದಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಖಾನ್ ಒತ್ತಾಯಿಸಿದ್ದು, ವೆಬ್ಸೈಟ್ನಿಂದ ಲೇಖನವನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News