‘ಕೆಲವರು ಮತ ಕೊಟ್ಟರೆ ಕೆಲವರು ಕಪಾಳಮೋಕ್ಷ ಮಾಡುತ್ತಾರೆ’ : ಸಂಜಯ್ ರಾವುತ್

Update: 2024-06-07 13:25 GMT

ಸಂಜಯ್ ರಾವುತ್ | PC : PTI 

ಮುಂಬೈ : “ಕೆಲವರು ಮತ ಕೊಟ್ಟರೆ ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ತನ್ನ ತಾಯಿಯೂ ಪ್ರತಿಭಟನೆಯಲ್ಲಿ ಕುಳಿತಿದ್ದರು ಎಂದು ಕಾನ್ಸ್ ಟೇಬಲ್ ಹೇಳಿದ್ದಾರೆ. ತಾಯಿಯ ಬಗ್ಗೆ ಯಾರಾರದೂ ಏನು ಹೇಳಿದರೆ ಅದು ಆಕ್ರೋಶವುಂಟು ಮಾಡುತ್ತದೆ” ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಗುರುವಾರ ನಟಿ, ರಾಜಕಾರಣಿ ಕಂಗನಾ ರಣಾವತ್ ಗೆ ಸಿಐಎಸ್‌ಎಫ್ ಮಹಿಳಾ ಕಾನ್ಸ್‌ಟೇಬಲ್‌ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ ಘಟನೆಯ ಕುರಿತು ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

“ಕಂಗನಾ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರೀಗ ಸಂಸದೆ. ಅವರ ಮೇಲೆ ದಾಳಿ ಮಾಡಬಾರದು. ಆದರೆ, ರೈತರನ್ನೂ ಗೌರವಿಸಬೇಕು” ಎಂದು ಸಂಜಯ್ ರಾವುತ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News