ಕೋವಿಡ್ ಲಸಿಕೆಯ ಅಡ್ಡ ಪರಿಣಾಮ ಕುರಿತು ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2024-10-14 07:15 GMT

ಹೊಸದಿಲ್ಲಿ : ಕೋವಿಡ್-19 ಲಸಿಕೆಯಿಂದ ಅಡ್ಡ ಪರಿಣಾಮಗಳಾಗಿರುವ ಕುರಿತು ತನಿಖೆಗೆ ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಜಾಗೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಪ್ರಚಾರ ಪಡೆಯಲು ನೀವು ಇದನ್ನು ಸಲ್ಲಿಸಿದ್ದಿರಿ. ಈ ಅರ್ಜಿಯಿಂದ ಏನು ಪ್ರಯೋಜನ? ಲಸಿಕೆ ಪಡೆಯದಿದ್ದರೆ ಅದರ ಪರಿಣಾಮಗಳು ಏನು ಎಂಬುದು ನಿಮಗೆ ತಿಳಿದಿದಿಯೇ? ಎಂದು ಪ್ರಿಯಾ ಮಿಶ್ರಾ ಹಾಗೂ ಇತರರು

ಸಲ್ಲಿಸಿದ್ದ ಅರ್ಜಿಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಕೋವಿಡ್-19 ಲಸಿಕೆ ಪಡೆದವರಿಗೆ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡಪರಿಣಾಮಗಳಾಗುತ್ತಿವೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News