ರಾಮಕೃಷ್ಣ ಮಿಷನ್ ಜಮೀನು ವಿವಾದ | ಶಿಮ್ಲಾದಲ್ಲಿ ಎರಡು ಹಿಂದೂ ಗುಂಪುಗಳ ನಡುವೆ ಘರ್ಷಣೆ : ಎಫ್ ಐಆರ್ ದಾಖಲು

Update: 2024-11-17 18:29 IST
Photo of Hindu temple simla

PC : PTI 

  • whatsapp icon

ಹೊಸದಿಲ್ಲಿ: ಶಿಮ್ಲಾದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಹಿಮಾಲಯನ್ ಬ್ರಹ್ಮೋ ಸಮಾಜ(Himalayan Brahmo Samaj) ಮತ್ತು ರಾಮಕೃಷ್ಣ ಮಿಷನ್ ಆಶ್ರಮ(Ramakrishna Mission Ashram)ದ ಸದಸ್ಯರ ನಡುವೆ ಘರ್ಷಣೆ ನಡೆದು ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಹಿಮಾಲಯನ್ ಬ್ರಹ್ಮೋ ಸಮಾಜಕ್ಕೆ ಸೇರಿದ ಭೂಮಿಯಲ್ಲಿದ್ದ ರಾಮಕೃಷ್ಣ ಮಿಷನ್ ಆಶ್ರಮಕ್ಕೂ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೃದ್ಧೆ ಸೇರಿದಂತೆ ಹಿಮಾಲಯನ್ ಬ್ರಹ್ಮೋ ಸಮಾಜಕ್ಕೆ ಸೇರಿದ 100ಕ್ಕೂ ಹೆಚ್ಚು ಜನರು ಪ್ರಾರ್ಥನೆ ಮಾಡಲು ಶನಿವಾರ ಆಶ್ರಮದ ಆವರಣಕ್ಕೆ ಪ್ರವೇಶಿಸಿದ ನಂತರ ಘರ್ಷಣೆ ಉದ್ಭವಿಸಿದೆ. ಹಿಮಾಲಯನ್ ಬ್ರಹ್ಮೋ ಸಮಾಜಕ್ಕೆ ಸೇರಿದ ಗುಂಪು ರಾತ್ರಿಯವರೆಗೆ ತಮ್ಮ ಪ್ರಾರ್ಥನೆಯನ್ನು ಮುಂದುವರಿಸಲು ಬಯಸಿದೆ. ಆದರೆ ರಾತ್ರಿ ಆಶ್ರಮವನ್ನು ಬಂದ್ ಮಾಡಬೇಕೆಂದು ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಸೇರಿದ ಸದಸ್ಯರು ಸೂಚಿಸಿದ್ದರಿಂದ ಘರ್ಷಣೆ ನಡೆದಿದೆ. ಕೋಟ್ಯಂತರ ಮೌಲ್ಯದ ಆಶ್ರಮದ ಮಾಲಕತ್ವದ ಬಗ್ಗೆ ವಿವಾದ ನಡೆಯುತ್ತಿರುವ ಮಧ್ಯೆ ಈ ಘರ್ಷಣೆ ನಡೆದಿದೆ. ಹಿಮಾಲಯನ್ ಬ್ರಹ್ಮಸಮಾಜದ ಗುಂಪು ತಮ್ಮ ಪ್ರಾರ್ಥನೆಯನ್ನು ಮುಗಿಸಿ, ರವಿವಾರ ಪ್ರಾರ್ಥನೆಗೆ ಅವಕಾಶ ನೀಡುವುದಾಗಿ ಷರತ್ತಿನ ಮೇಲೆ ಹೊರಡಲು ಸಿದ್ದರಾದಾಗ ರಾಮಕೃಷ್ಣ ಮಿಷನ್ ಗುಂಪಿನ ಸದಸ್ಯರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಗಾಯಗೊಂಡರು ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ತನ್ಮಹಿಮಾನಂದ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಆಸ್ತಿಯನ್ನು ಬ್ರಹ್ಮ ಸಮಾಜವು ಧಾರ್ಮಿಕ ಉದ್ದೇಶಗಳಿಗಾಗಿ ಆಶ್ರಮಕ್ಕೆ ಹಸ್ತಾಂತರಿಸಿದ್ದು, ಮಿಷನ್ 2014ರಿಂದ ಇಲ್ಲಿ ಕಾರ್ಯಾಚರಿಸುತ್ತಿದೆ. ಅವರು ಭಕ್ತರಂತೆ ಆಶ್ರಮವನ್ನು ಪ್ರವೇಶಿಸಿದ್ದಾರೆ ಮತ್ತು ಪೂಜೆ ಸಲ್ಲಿಸಿದ್ದಾರೆ. ರಾತ್ರಿ 8:30 ಆಗುತ್ತಿದ್ದಂತೆ ಆಶ್ರಮವನ್ನು ಮುಚ್ಚಲು ಬಯಸಿದ ಹಿಮಾಲಯನ್ ಬ್ರಹ್ಮೋ ಸಮಾಜದ ಸದಸ್ಯರು ಜೈ ಬ್ರಹ್ಮೋ, ಇದು ನಮ್ಮ ದೇವಾಲಯ ಮತ್ತು ನೀವು ಇದನ್ನು ಆಕ್ರಮಿಸಿಕೊಂಡಿದ್ದೀರಿ ಎಂದು ಘೋಷಣೆಗಳನ್ನು ಕೂಗಿದ್ದು, ಸ್ಥಳದಿಂದ ತೆರಳಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಶೀತಲ್ ವ್ಯಾಸ್, ಆಕೆಯ ಪತಿ ಎಬಿವಿಪಿ ನಾಯಕ ನಿತಿನ್ ವ್ಯಾಸ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News