ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಭಾರತೀಯರ ಬಿಡುಗಡೆ
ಹೊಸದಿಲ್ಲಿ: ರಷ್ಯಾ ಸೇನೆಯಲ್ಲಿ ಹಲವು ಭಾರತೀಯರು ಅಡ್ಡ ಕಸುಬಾಗಿ ಉದ್ಯೋಗ ಪಡೆಯುತ್ತಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಸಿಲುಕದೆ ದೂರ ಉಳಿಯಬೇಕೆಂದು ಭಾರತ ಸರ್ಕಾರ ಕಳೆದ ವಾರ ಹೇಳಿತ್ತು.
ಭಾರತದ ಸಂಬಂಧಿತ ಪ್ರಾಧಿಕಾರಗಳ ಹಸ್ತಕ್ಷೇಪದ ನಂತರ ಹಲವು ಭಾರತೀಯ ನಾಗರಿಕರನ್ನು ರಷ್ಯಾ ಸೇನೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
“ರಷ್ಯಾದ ಸೇನೆಯಲ್ಲಿರುವ ಭಾರತೀಯರು ಬಿಡುಗಡೆಗಾಗಿ ಸಹಾಯ ಯಾಚುತ್ತಿದ್ದಾರೆ” ಎಂಬ ಕುರಿತ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಮಾಸ್ಕೋದಲ್ಲಿನ ಭಾರತೀಯ ದೂತಾವಾಸದ ಗಮನಕ್ಕೆ ತರಲಾದ ಪ್ರತಿಯೊಂದು ಪ್ರಕರಣವನ್ನು ರಷ್ಯಾದ ಸಂಬಂಧಿತ ಪ್ರಾಧಿಕಾರಗಳ ಬಳಿ ಪ್ರಸ್ತಾಪಿಸಲಾಗಿದೆ,” ಎಂದು ಹೇಳಿದೆ.
ಈ ಪ್ರಯತ್ನದ ಫಲವಾಗಿ ಈಗಾಗಲೇ ಹಲವಾರು ಭಾರತೀಯರ ಬಿಡುಗಡೆಯಾಗಿದೆ ಆದರೆ ರಷ್ಯಾ ಸೇನೆಯಲ್ಲಿ ಎಷ್ಟು ಮಂದಿ ಭಾರತೀಯರಿದ್ದಾರೆಂಬ ಕುರಿತು ಸ್ಪಷ್ಟನೆಯಿಲ್ಲ. ಆದರೆ ಕೆಲ ವರದಿಗಳ ಪ್ರಕಾರು ಸುಮಾರು 100 ರಷ್ಟು ಭಾರತೀಯರು ರಷ್ಯಾ ಸೇನೆಯಲ್ಲಿರಬಹುದು.