“ಪಾಪಿಗಳು ಹೋದರು, ಅವರು ಸೋತರು “; ವಿಶ್ವಕಪ್ ಸೋಲಿಗೆ ಪ್ರಧಾನಿ ವಿರುದ್ಧ ಮಮತಾ ಪರೋಕ್ಷ ವಾಗ್ದಾಳಿ

Update: 2023-11-23 21:54 IST
“ಪಾಪಿಗಳು ಹೋದರು, ಅವರು ಸೋತರು “; ವಿಶ್ವಕಪ್ ಸೋಲಿಗೆ ಪ್ರಧಾನಿ ವಿರುದ್ಧ ಮಮತಾ ಪರೋಕ್ಷ ವಾಗ್ದಾಳಿ

ಮಮತಾ ಬ್ಯಾನರ್ಜಿ | Photo: PTI  

  • whatsapp icon

ಕೋಲ್ಕತಾ,: ಇತ್ತೀಚೆಗೆ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಕ್ರಿಕೆಟ್ ತಂಡ ಸೋಲನುಭವಿಸಿದ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗುರುವಾರ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

‘‘ಫೈನಲ್ ಪಂದ್ಯ ಕೋಲ್ಕತಾ (ಈಡನ್ ಗಾರ್ಡನ್) ಅಥವಾ ವಾಂಖೆಡೆ (ಮುಂಬೈ)ಯಲ್ಲಿ ನಡೆದಿದ್ದರೆ ಭಾರತ ತಂಡ ಜಯ ಗಳಿಸುತ್ತಿತ್ತು. ನಮ್ಮ ಆಟಗಾರರು ಕೇಸರಿ ಜರ್ಸಿ ಧರಿಸುವಂತೆ ಮಾಡಲಾಯಿತು. ಆದರೆ, ಅವರು ವಿರೋಧಿಸಿದರು. ಆದುದರಿಂದ ಭಾರತ ತಂಡ ಪಂದ್ಯದ ಸಂದರ್ಭ ಕೇಸರಿ ಜೆರ್ಸಿಯನ್ನು ಧರಿಸಲಿಲ್ಲ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಭಾರತದ ಕ್ರಿಕೆಟಿಗರು ತುಂಬಾ ಚೆನ್ನಾಗಿ ಆಡಿದರು. ಆದುದರಿಂದ ಅವರು ಎಲ್ಲಾ ಪಂದ್ಯಗಳನ್ನು ಗೆದ್ದರು. ಆದರೆ, ಕೊನೆಯ ಪಂದ್ಯ ವೀಕ್ಷಿಸಲು ಅವರು (ಮೋದಿ ಹಾಗೂ ಅಮಿತ್ ಶಾ) ಹೋಗಿದ್ದರು’’ ಎಂದರು.

ಯಾರ ಹೆಸರನ್ನೂ ಉಲ್ಲೇಖಿಸದೆ ವಾಗ್ದಾಳಿ ಮುಂದುವರಿಸಿದ ಮಮತಾ ಬ್ಯಾನರ್ಜಿ, ಪಾಪಿಗಳು ಎಲ್ಲಿ ಹೋದರೂ, ಅಲ್ಲಿಗೆ ತಮ್ಮ ಪಾಪಗಳನ್ನು ಕೊಂಡೊಯ್ಯುತ್ತಾರೆ. ಪಾಪ ಯಾರನ್ನೂ ಬಿಡುವುದಿಲ್ಲ ಎಂಬ ಮಾತನ್ನು ಯಾರೂ ಮರೆಯಬಾರದು ಎಂದರು.

ಈ ಹಿಂದೆ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪಂದ್ಯದಲ್ಲಿ ಪಾಲ್ಗೊಂಡಿರುವುದರಿಂದ ಭಾರತ ಸೋತಿದೆ ಎಂದು ಹೇಳಿದ್ದರು.

ಅಹ್ಮದಾಬಾದ್ ನಲ್ಲಿ ನ.19ರಂದು ನಡೆದ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತ ಸೋಲನುಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News