ಭಾರತ ಕ್ರಿಕೆಟ್ ತಂಡದ ವೇಗಿ ಸಿರಾಜ್ ಇನ್ನು ಪೊಲೀಸ್ ಅಧಿಕಾರಿ!
ಹೈದರಾಬಾದ್ : ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಯಾಗಿ ಶುಕ್ರವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿತೇಂದರ್ ಅವರಿಗೆ ವರದಿ ಮಾಡಿದ ನಂತರ ಸಿರಾಜ್ ಅಧಿಕಾರ ವಹಿಸಿಕೊಂಡರು.
ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್-2024 ಗೆದ್ದ ಕೆಲವು ದಿನಗಳ ನಂತರ, ಜುಲೈ 9, 2024 ರಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ವಿಜೇತ ತಂಡದ ಭಾಗವಾಗಿದ್ದ ಸಿರಾಜ್‌ಗೆ ಸರ್ಕಾರಿ ಉದ್ಯೋಗ ನೀಡಲು ಮತ್ತು ಜಮೀನು ಮಂಜೂರು ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಆಗಸ್ಟ್ ಮೊದಲ ವಾರದಲ್ಲಿ, ರಾಜ್ಯ ಸಚಿವ ಸಂಪುಟವು ಸಿರಾಜ್ ಮತ್ತು ಚಾಂಪಿಯನ್ ಬಾಕ್ಸರ್ ನಿಖತ್ ಝರೀನ್ ಅವರಿಗೆ ಡಿಎಸ್ಪಿ ಕೇಡರ್ನ ಗ್ರೂಪ್-1 ಹುದ್ದೆಗಳನ್ನು ನೀಡಲು ನಿರ್ಧರಿಸಿತು. ಕೆಲವು ದಿನಗಳ ನಂತರ, ಸರ್ಕಾರವು ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರಲ್ಲಿ ಸಿರಾಜ್ ಗೆ 600 ಚದರ ಭೂಮಿಯನ್ನು ಮಂಜೂರು ಮಾಡಿತು.
ಮುಹಮ್ಮದ್ ಸಿರಾಜ್ ಶುಕ್ರವಾರ ಡಿಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮೊದಲು, ಸೆಪ್ಟೆಂಬರ್ 18, 2024 ರಂದು, ಝರೀನ್ ಅವರು ಡಿಎಸ್ಪಿಯಾಗಿ ರಾಜ್ಯ ಪೊಲೀಸ್ ಸೇವೆ ಗೆ ಸೇರಿದರು.