ನಿದ್ದೆಗೆ ಜಾರಿದ ಚಾಲಕ: ಬಸ್ ಪಲ್ಟಿಯಾಗಿ ಬೆಂಕಿ, ಮಹಿಳೆ ದಾರುಣ ಸಾವು

Update: 2024-01-13 15:46 GMT

Photo: PTI 

ಹೈದರಾಬಾದ್: ತೆಲಂಗಾಣದ ಜೋಗುಳಾಂಬ ಗಡ್ವಾಲ್ ಜಿಲ್ಲೆಯಲ್ಲಿ ಶನಿವಾರ ಚಿತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳಾ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಜಗನ್ ಅಮೆಝಾನ್ ಟ್ರಾವೆಲ್ ಬಸ್ ಹೈದರಾಬಾದ್ ನಿಂದ ಚಿತ್ತೂರಿಗೆ ಹೋಗುತ್ತಿದ್ದಾಗ ಶನಿವಾರ ಮುಂಜಾನೆ 3 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದರೆ.

ಬಸ್ಸಿನ ಚಾಲಕ ನಿದ್ದೆಗೆ ಜಾರಿದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣ ತಪ್ಪಿದೆ. ಬಳಿಕ ಬಸ್ಸು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿತು. ಪ್ರಯಾಣಿಕರು ಬಸ್ಸಿನಿಂದ ಹೊರಗೆ ಧಾವಿಸಿದರು. ಆದರೆ, ಓರ್ವ ಮಹಿಳೆಯ ಕೈ ಬಸ್ಸಿನ ಸಂಧಿನಲ್ಲಿ ಸಿಲುಕಿಕೊಂಡಿದ್ದರಿಂದ ಅವರಿಗೆ ಹೊರಹೋಗಲು ಸಾಧ್ಯವಾಗಲಿಲ್ಲ. ಅವರು ಬಸ್ಸಿನ ಜೊತೆಗೆ ಬೆಂಕಿಯಲ್ಲಿ ಸುಟ್ಟು ಹೋದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News