ಟ್ವಿಟರ್‌ಗೆ ‘X’ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಟ್ವೀಟ್ ಬದಲು ಪೋಸ್ಟ್, ರೀಟ್ವೀಟ್ ಬದಲು ರೀಪೋಸ್ಟ್ ಎಂದು ಬದಲಾವಣೆ ಸಾಧ್ಯತೆ

Update: 2023-07-30 12:30 GMT

Screengrab | twitter 

ಸ್ಯಾನ್ ಫ್ರಾನ್ಸಿಸ್ಕೊ: ಎಲಾನ್ ಮಸ್ಕ್ ಮಾಲಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್‌ಗೆ ‘X’ ಎಂದು ಮರುನಾಮಕರಣ ಮಾಡಿದ ನಂತರ, ಅದರ ಇತ್ತೀಚಿನ ಆ್ಯಂಡ್ರಾಯ್ಡ್ ಬೀಟಾ ತಂತ್ರಜ್ಞಾನದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ ಎಂದು X News Daily ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೊಸ್ಟ್‌ಗಳಿಗೆ ಬಳಸಲಾಗುತ್ತಿದ್ದ 'ಟ್ವೀಟ್ಸ್' ಪದದ ಬದಲಿಗೆ ಇನ್ನು ಮುಂದೆ 'ಪೋಸ್ಟ್ಸ್' ಎಂಬ ಪದ ಬಳಕೆಯಾದರೆ, ಇತರೆ ಬಳಕೆದಾರರ ಪೋಸ್ಟ್‌ಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ಬಳಸಲಾಗುತ್ತಿದ್ದ 'ರೀಟ್ವೀಟ್ಸ್' ಎಂಬ ಪದದ ಬದಲು 'ರೀಪೋಸ್ಟ್ಸ್' ಎಂಬ ಪದ ಬಳಕೆಯಾಗುವ ಸಾಧ್ಯತೆ ಇದೆ.

"ಎಕ್ಸ್‌ನ ನೂತನ ಆ್ಯಂಡಾಯ್ಡ್ ಬೀಟಾ ಆವೃತ್ತಿಯಲ್ಲಿ 'ಟ್ವಿಟರ್' ಹಾಗೂ 'ಟ್ವೀಟ್' ಎಂಬ ಪದಗಳಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳನ್ನು ಅಳಿಸಿ ಹಾಕಲಾಗಿದೆ. ಇನ್ನು 'ಟ್ವೀಟ್ಸ್' ಅನ್ನು ಕೇವಲ 'ಪೋಸ್ಟ್ಸ್' ಎಂದು ಕರೆಯಲಿದ್ದು, ಎಕ್ಸ್ ವೇದಿಕೆಯ ಸಲಕರಣೆಗಳ ಪುಟದಲ್ಲಿ ಟ್ವಿಟರ್ ಅನ್ನು ಎಕ್ಸ್ ಎಂದು ಕರೆಯಲಾಗುತ್ತದೆ. ಇನ್ನು ಮುಂದೆ 'ರೀಟ್ವೀಟ್ಸ್', 'ರೀಪೋಸ್ಟ್ಸ್' ಎಂದಾಗಲಿದೆ" ಎಂದು ಆ್ಯಂಡ್ರಾಯ್ಡ್ ಬೀಟಾ ಆವೃತ್ತಿಯದು ಎಂದು ವರದಿಯಾಗಿರುವ ಛಾಯಾಚಿತ್ರಗಳನ್ನು X News Daily ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ವಿಸ್ತಾರವಾದ ಮರುನಾಮಕರಣದ ಭಾಗವಾಗಿ ಟ್ವಿಟರ್ ಕಂಪನಿಯು ನೀಲಿ ಹಕ್ಕಿಯ ಚಿತ್ರವನ್ನು ಬದಲಿಸಿ X ಅನ್ನು ತನ್ನ ಲೋಗೋ ಆಗಿ ಕಳೆದ ಸೋಮವಾರ ಅನಾವರಣಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News