ಶೇರು ಮಾರುಕಟ್ಟೆ ಅಪಾಯಗಳ ಬಗ್ಗೆ ರಾಹುಲ್ ಗಾಂಧಿ ಎಚ್ಚರಿಕೆ

Update: 2024-10-27 10:58 GMT

ರಾಹುಲ್ ಗಾಂಧಿ (Photo: PTI)

ಹೊಸದಿಲ್ಲಿ: ಭಾರತೀಯ ಶೇರು ಮಾರುಕಟ್ಟೆಗಳಲ್ಲಿನ ಇತ್ತೀಚಿನ ತೀವ್ರ ಕುಸಿತದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ತಮ್ಮ ಹಣವನ್ನು ಹೂಡಿಕೆ ಮಾಡಿರುವ ಯುವ ಹೂಡಿಕೆದಾರರು, ವೇತನದಾರ ಉದ್ಯೋಗಿಗಳು ಮತ್ತು ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಕಾರ್ಯತಂತ್ರಗಳನ್ನು ರೂಪಿಸುವಂತೆ ಪಕ್ಷಕ್ಕೆ ಕರೆ ನೀಡಿದ್ದಾರೆ.

ಶನಿವಾರ ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ ಖೇರಾ ಜೊತೆ ವೀಡಿಯೊ ಸಂವಾದದಲ್ಲಿ ರಾಹುಲ್,ಶೇರು ಮಾರುಕಟ್ಟೆಯ ಅಪಾಯಕಾರಿ ಸ್ವರೂಪವನ್ನು ಒತ್ತಿ ಹೇಳಿದರು. ಚಿಲ್ಲರೆ ಹೂಡಿಕೆದಾರರನ್ನು ಎಚ್ಚರಿಸಲು ಮತ್ತು ಅವರ ಉಳಿತಾಯಗಳನ್ನು ರಕ್ಷಿಸಲು ರಚನಾತ್ಮಕ ಮಾರ್ಗಗಳನ್ನು ಅನ್ವೇಷಿಸುವಂತೆ ಪಕ್ಷದ ನಾಯಕರನ್ನು ಅವರು ಆಗ್ರಹಿಸಿದರು.

ಚಿಲ್ಲರೆ ಹೂಡಿಕೆದಾರರನ್ನು ರಕ್ಷಿಸಲು ಸಂವಹನ ಅಭಿಯಾನದಲ್ಲಿ ಭಾಗವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ ಅವರು,‘ನಾನು ಅದರಲ್ಲಿ ತೊಡಗಿಕೊಳ್ಳಬೇಕೆಂದು ನೀವು ಬಯಸಿದರೆ ಏನು ಮಾಡಬೇಕು ಎಂದು ಹೇಳಿ’ ಎಂದು ಖೇರಾ ಅವರಿಗೆ ತಿಳಿಸಿದರು.

ಸಂವಾದದ ತುಣುಕನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ರಾಹುಲ್, ‘ಭ್ರಷ್ಟರನ್ನು ಕಾಪಾಡುತ್ತಿರುವ ಸಿಂಡಿಕೇಟ್ ನಲ್ಲಿ ಯಾರಿದ್ದಾರೆ?’ಎಂಬ ಅಡಿಬರಹವನ್ನು ನೀಡಿದ್ದಾರೆ.

ಶುಕ್ರವಾರ ಶೇರು ಮಾರುಕಟ್ಟೆಗಳಲ್ಲಿ ಭಾರೀ ಕುಸಿತದಿಂದಾಗಿ ಹೂಡಿಕೆದಾರರ ಸಂಪತ್ತು ಗಮನಾರ್ಹವಾಗಿ ಕರಗಿದೆ. ಇಂಡಸ್ಇಂಡ್ ಬ್ಯಾಂಕ್ ಶೇರುಗಳಲ್ಲಿ ಶೇ.19ರಷ್ಟು ಕುಸಿತ ಮತ್ತು ವಿದೇಶಿ ನಿಧಿಗಳ ನಿರಂತರ ಹೊರಹರಿವಿನಿಂದಾಗಿ ಹೂಡಿಕೆದಾರರು 6.80 ಲಕ್ಷ ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News