ಜಾತಿ ತಾರತಮ್ಯ ಉತ್ತೇಜಿಸುವ ಕಾರಾಗೃಹ ಮಾರ್ಗಸೂಚಿ: ಸುಪ್ರೀಂ ಕಳವಳ

Update: 2024-07-11 10:49 GMT

ಹೊಸದಿಲ್ಲಿ: ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿನ ಕೆಲ ನಿಬಂಧನೆಗಳು ಜಾತಿ ತಾರತಮ್ಯವನ್ನು ಉತ್ತೇಜಿಸುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ʼBar and Benchʼ ವರದಿ ಮಾಡಿದ್ದು, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಪತ್ರಕರ್ತರಾದ ಸುಕನ್ಯಾ ಶಾಂತಾ ಸಲ್ಲಿಸಿದ ಅರ್ಜಿ ಬಗೆಗಿನ ತೀರ್ಪು ಕಾಯ್ದಿರಿಸಿದೆ.

"ಭಾರತದ ಕಾರಾಗೃಹಗಳಲ್ಲಿ ಜಾತಿ ಆಧಾರದಲ್ಲಿ ಶ್ರಮ ವಿಭಜನೆ, ಪ್ರತ್ಯೇಕಿಸುವಿಕೆ ಮತ್ತು ತಾರತಮ್ಯ ಎಸಗಲಾಗುತ್ತಿದೆ ಎಂದು ಶಾಂತಾ ವಿವರಿಸಿದ್ದಾರೆ. ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿ ಅಧಿಸೂಚಿತ ಪಂಗಡಗಳಿಗೆ ಸೇರಿದವರ ಮೇಲೆ ತಾರತಮ್ಯ ಎಸಗಲಾಗುತ್ತಿದೆ. ಇವರನ್ನು ಅಪರಾಧಿಗಳು, ತಿರುಕರು, ವಲಸೆಯವರು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಗುಂಪುಗಳಿಗೆ ಸೇರಿರುವ ಕೈದಿಗಳನ್ನು ಮತ್ತು ವೃತ್ತಿಪರ ಅಪರಾಧಿಗಳುಎಂಬ ವರ್ಗದವರ ಜತೆ ಅವರ ಜಾತಿ ಆಧರಿಸಿ ಕೆಲಸ ನಿಯೋಜಿಸಲಾಗುತ್ತದೆ ಎಂದು ಶಾಂತಾ ವಿವರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News