ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ : ನ್ಯಾಯಾಲಯಕ್ಕೆ ಹೋಗಲು ಪಕ್ಷದ ನಿರ್ಧಾರ

Update: 2024-04-21 16:01 GMT

ಶಕ್ತಿಸಿಂಹ ಗೋಹಿಲ್ | PC : X 

ಅಹ್ಮದಾಬಾದ್ : ಚುನಾವಣೆಗಳಲ್ಲಿ ಸೋಲನ್ನು ಗ್ರಹಿಸಿ ಆತಂಕಗೊಂಡಿರುವ ಬಿಜೆಪಿಯ ಒತ್ತಾಸೆಯ ಮೇರೆಗೆ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನೀಲೇಶ ಕುಂಭಾನಿಯವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಹ ಗೋಹಿಲ್ ಅವರು ರವಿವಾರ ಇಲ್ಲಿ ಆರೋಪಿಸಿದರು.

ಈ ಬೆಳವಣಿಗೆಯನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಬಣ್ಣಿಸಿದ ಅವರು, ನಾಮಪತ್ರದಲ್ಲಿ ಅನುಮೋದಕರ ಸಹಿಗಳಲ್ಲಿ ವ್ಯತ್ಯಾಸದ ಕಾರಣವನ್ನು ನೀಡಿ ಅದನ್ನು ತಿರಸ್ಕರಿಸಿದ ಚುನಾವಣಾಧಿಕಾರಿಗಳ ನಿರ್ಧಾರದ ವಿರುದ್ಧ ಪಕ್ಷವು ಗುಜರಾತ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲಿದೆ ಎಂದು ತಿಳಿಸಿದರು.

ಸೂರತ್ನಿಂದ ಪಕ್ಷದ ಬದಲಿ ಅಭ್ಯರ್ಥಿ ಸುರೇಶ ಪಡ್ಸಲ ಅವರ ನಾಮಪತ್ರವೂ ಅಸಿಂಧುಗೊಂಡಿರುವುದರಿಂದ ಕಾಂಗ್ರೆಸ್ ಚುನಾವಣಾ ಕಣದಿಂದ ಹೊರದಬ್ಬಲ್ಪಟ್ಟಿದೆ.

ಈ ಸಲದ ಚುನಾವಣೆಗಳಲ್ಲಿ ವಾತಾವರಣ ತನ್ನ ಪರವಾಗಿಲ್ಲ ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಅಭ್ಯಥಿಗಳ ನಾಮಪತ್ರಗಳು ತಿರಸ್ಕೃತಗೊಳ್ಳುವಂತೆ ಅದು ಸಂಚು ರೂಪಿಸಿದೆ ಎಂದು ಗೋಹಿಲ್ ಕಿಡಿಕಾರಿದರು.

ಕುಂಭಾನಿಯವರನ್ನು ಬೆದರಿಸುವ ಪ್ರಯತ್ನಗಳೂ ನಡೆದಿದ್ದವು ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News