ತಮಿಳುನಾಡು: ಐವರು ಜಿಲ್ಲಾಧಿಕಾರಿಗಳಿಗೆ ಈ.ಡಿ.ಸಮನ್ಸ್‌ಗೆ ಮೂರು ವಾರಗಳ ತಡೆ ನೀಡಿದ ಮದ್ರಾಸ್ ಹೈಕೋರ್ಟ್
Update: 2023-11-28 15:43 GMT
ಚೆನ್ನೈ: ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಈ.ಡಿ.) ವು ಹೊರಡಿಸಿರುವ ಸಮನ್ಸ್‌ಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ ಮೂರು ವಾರಗಳ ತಡೆಯಾಜ್ಞೆಯನ್ನು ನೀಡಿದೆ.
ರಾಜ್ಯದಲ್ಲಿ ನದಿ ಮರಳಿನ ಗಣಿಗಾರಿಕೆ ಮತ್ತು ಮಾರಾಟದಲ್ಲಿ ಅಕ್ರಮಗಳು ಮತ್ತು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಕುರಿತು ತನ್ನ ತನಿಖೆಯ ಭಾಗವಾಗಿ ಈ.ಡಿ. 10 ಜಿಲ್ಲಾಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ರಾಜ್ಯ ಸರಕಾರ ಮತ್ತು ಐವರು ಜಿಲ್ಲಾಧಿಕಾರಿಗಳು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ನ್ಯಾಯಾಲಯವು ಅರ್ಜಿಗಳಿಗೆ ಉತ್ತರಿಸಲು ಈ.ಡಿ.ಗೆ ಮೂರು ವಾರಗಳ ಸಮಯವನ್ನು ನೀಡಿದೆ.ಈ ಹಿಂದೆ ಈ.ಡಿ. ನದಿಗಳಿಂದ ಅಕ್ರಮವಾಗಿ ಹೊರತೆಗೆಯಲಾದ ಮರಳಿನ ಮಾರಾಟ ಕಾರ್ಯವಿಧಾನದ ವಿವರಗಳನ್ನು ತಿಳಿದುಕೊಳ್ಳಲು ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳನ್ನು ವಿಚಾರಣೆಗೊಳಪಡಿಸಿದ್ದು, ಅವರು ಜಿಲ್ಲಾಧಿಕಾರಿಗಳತ್ತ ಬೆಟ್ಟು ಮಾಡಿದ್ದರು ಎನ್ನಲಾಗಿದೆ.