ಇಸ್ರೇಲ್-ಫೆಲೆಸ್ತೀನ್ ಸಂಘರ್ಷದಿಂದ ಭಾರತದಲ್ಲಿ ಇಂಧನ ಸಮಸ್ಯೆ ಸೃಷ್ಟಿಯಾಗದು

Update: 2023-10-09 16:11 GMT

                                                              ಹರ್ದೀಪ್ ಸಿಂಗ್ ಪುರಿ | Photo: PTI

ಹೊಸದಿಲ್ಲಿ: ಇಸ್ರೇಲ್-ಫೆಲೆಸ್ತೀನ್ ಸಂಘರ್ಷದಿಂದ ಭಾರತದಲ್ಲಿ ಇಂಧನ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಹಾಗೂ ದೇಶವು ಅದನ್ನು ಸಮರ್ಥವಾಗಿ ನಿಭಾಯಿಸುವುದು ಎಂದು ಕೇಂದ್ರ ಪೆಟ್ರೋಲಿಯಮ್ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.

ಆದರೆ, ಇಂಥ ಪರಿಸ್ಥಿತಿಗಳು ಪರಿಶುದ್ಧ ಇಂಧನವನ್ನು ಬಳಸುವಂತೆ ದೇಶಗಳನ್ನು ಉತ್ತೇಜಿಸುತ್ತದೆ ಎಂದು ಅವರು ಎಚ್ಚರಿಸಿದರು.

‘‘ಇಸ್ರೇಲ್-ಫೆಲೆಸ್ತೀನ್ ಸಂಘರ್ಷ ನಡೆಯುತ್ತಿರುವ ಸ್ಥಳವು, ಹಲವು ವಿಧಗಳಲ್ಲಿ ಜಾಗತಿಕ ಇಂಧನದ ಕೇಂದ್ರವಾಗಿದೆ ಎನ್ನುವುದನ್ನು ನಾವು ಮರೆಯಬಾರದು. ನಾವು ಅದನ್ನು ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ನಾವು ಮುಂದೆ ಸಾಗುತ್ತಿರುವಂತೆಯೇ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಾ ಹೋಗುತ್ತೇವೆ. ಇಲ್ಲಿ ಸಮಸ್ಯೆಯಿಲ್ಲ. ಆದರೆ, ಇಂಥ ಅನಿಶ್ಚಿತತೆಗಳು ಪರಿಸರ ಸಹ್ಯ ಹಾಗೂ ಪರಿಶುದ್ಧ ಇಂಧನ ಮಾದರಿಯತ್ತ ನಾವು ಹೊರಳುವಂತೆ ಮಾಡುತ್ತವೆ ಎನ್ನುವುದನ್ನು ನಾನು ಇಲ್ಲಿ ಹೇಳಬಯಸುತ್ತೇನೆ’’ ಎಂದು ಸಚಿವರು ಹೇಳಿದರು.

ಅವರು ಸೋಮವಾರ ಹೊಸದಿಲ್ಲಿಯಲಿ ನಡೆದ ಇಂಧನ ತಂತ್ರಜ್ಞಾನ ಸಮಾವೇಶದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದರು.

ಬೆಳವಣಿಗೆಗಳನ್ನು ಭಾರತವು ನಿಕಟವಾಗಿ ಗಮನಿಸುತ್ತಿದೆ ಹಾಗೂ ಈ ಪರಿಸ್ಥಿತಿಯನ್ನು ದೇಶವು ಪ್ರಬುದ್ಧತೆಯಿಂದ ನಿಭಾಯಿಸುತ್ತದೆ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News