ವಿಚಾರಣೆಯಿಲ್ಲದೆ ಆರೋಪಿಗಳನ್ನು ನಿರಂತರ ಜೈಲಿನಲ್ಲಿಡುವ ಈಡಿ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ
ಹೊಸದಿಲ್ಲಿ: ಜಾಮೀನು ಪಡೆಯದೇ ಇರುವಂತೆ ಮಾಡಲು ವಿಚಾರಣೆ ಆರಂಭಗೊಳ್ಳುವ ಮುನ್ನ ಜನರನ್ನು ನಿರಂತರವಾಗಿ ಜೈಲಿನಲ್ಲಿಡುವ ಕ್ರಮಕ್ಕಾಗಿ ಜಾರಿ ನಿರ್ದೇಶನಾಲಯವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಆರೋಪಿಗಳು ಜೈಲಿನಲ್ಲೇ ಇರುವಂತೆ ಮಾಡಲು ವಿಚಾರಣೆಗಳು ಮುಂದುವರಿಯುತ್ತಾ ಇರುವಂತೆ ಮಾಡುವ ಈಡಿ ಪದ್ಧತಿಯ ಬಗ್ಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರ ಪೀಠ ತನ್ನ ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ಆರೋಪಿಯೊಬ್ಬನನ್ನು ಬಂಧಿಸಿದಾಗ ವಿಚಾರಣೆ ಆರಂಭಗೊಳ್ಳಬೇಕು ಎಂದು ಹೇಳಿದೆ.
ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಅವರ ಸಹವರ್ತಿ ಎನ್ನಲಾದ ಪ್ರೇಮ್ ಪ್ರಕಾಶ್ ಎಂಬವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸುವಾಗ ಮೇಲಿನಂತೆ ಹೇಳಿದೆ. ಆಗಸ್ಟ್ 2022ರಲ್ಲಿ ಅವರು ಬಂಧಿತರಾಗಿದ್ದು ಜನವರಿ 2023ರಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು.
ಪ್ರಕಾಶ್ ಈಗಾಗಲೇ 18 ತಿಂಗಳು ಜೈಲಿನಲ್ಲಿದ್ದುದರಿಂದ ಅವರಿಗೆ ಜಾಮೀನು ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.