ಒರಟಾಗಿ ವರ್ತಿಸಿದ್ದಕ್ಕೆ ಮಾಲಕಿಗೆ ವಿದ್ಯುತ್ ಶಾಕ್ ನೀಡಿದ ಕಾರ್ಮಿಕ!

Update: 2023-09-19 11:49 GMT

ಸಾಂದರ್ಭಿಕ ಚಿತ್ರ | Image Source : PTI

ಮುಂಬೈ: ಒರಟಾಗಿ ವರ್ತಿಸಿದ್ದಕ್ಕೆ ತನ್ನ ಮಾಲಕಿಗೆ ಕರೆಂಟ್‌ ಶಾಕ್‌ ನೀಡಿ, ಥಳಿಸಿದ ಆರೋಪದಲ್ಲಿ 25ರ ವಯಸ್ಸಿನ ಅಡುಗೆ ಮಾಡುವ ಕಾರ್ಮಿಕನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv ವರದಿ ಮಾಡಿದೆ.

ಅಂಧೇರಿಯ ಎತ್ತರದ ವಸತಿ ಸಮುಚ್ಚಯದಲ್ಲಿ ಈ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಘಟನೆಯ ನಂತರ ಆರೋಪಿ ರಾಜ್ಕುಮಾರ್ ಸಿಂಗ್ ಪರಾರಿಯಾಗಿದ್ದಾನೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬೆತ್ಶೆಬಾ ಮೋರಿಸ್ ಶೇತ್ ಅವರ ಪ್ರಕಾರ, ಭಾನುವಾರ ಮಧ್ಯಾಹ್ನ ಲಘು ನಿದ್ದೆಯಿಂದ ಎಚ್ಚರಗೊಂಡಾಗ, ಸಿಂಗ್ ಎರಡು ವಿದ್ಯುತ್‌ ಚಾಲಿತ ತಂತಿಗಳನ್ನು ಹಿಡಿದು ನಿಂತಿರುವುದನ್ನು ಕಂಡಿದ್ದಾರೆ. ಆಕೆಯ ಹಣೆಯ ಬದಿಗೆ ತಂತಿಯಿಂದ ಶಾಕ್ ನೀಡಿದ್ದಲ್ಲದೆ, ಥಳಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಆಕೆಯ ಕಿರುಚಾಟವನ್ನು ಕೇಳಿ ಪಕ್ಕದ ಕೋಣೆಯಲ್ಲಿದ್ದ ಆಕೆಯ 11 ವರ್ಷದ ಮಗ ಬಂದಾಗ, ಸಿಂಗ್ ಆ ಹುಡುಗನಿಗೂ ಹಲ್ಲೆ ಮಾಡಬಹುದು ಎಂಬ ಭಯದಿಂದ, ಮಾಲಕಿ

ಒಳಗೆ ಬೀಗ ಹಾಕುವಂತೆ ಹೇಳಿದ್ದಾರೆ ಎನ್ನಲಾಗಿದೆ. ಬಳಿಕ ಸಿಂಗ್ ಕ್ಷಮೆಯಾಚಿಸಿ, ಫ್ಲಾಟ್ ತೊರೆದಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ.

ಈ ಕುರಿತು ಎಫ್‌ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು, ನಾಪತ್ತೆಯಾಗಿರುವ ಮನೆ ಕೆಲಸದ ಕಾರ್ಮಿಕನ ಪತ್ತೆಯಲ್ಲಿ ತೊಡಗಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News