ಪಶ್ಚಿಮ ಬಂಗಾಳ ಪಂಚಾಯ್ ಚುನಾವಣೆ: ಟಿಎಂಸಿ 14,970 ಸೀಟುಗಳಲ್ಲಿ ಮುನ್ನಡೆ, ಬಿಜೆಪಿ 3421 ಸೀಟುಗಳಲ್ಲಿ ಮುನ್ನಡೆ
ಕೊಲ್ಕತ್ತಾ: ಪಶ್ಚಿಮ ಬಂಗಾಳ ಗ್ರಾಮ ಪಂಚಾಯತ್ ಚುನಾವಣೆಗಳ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯಂತೆ ರಾಜ್ಯದ ಆಡಳಿತ ಟಿಎಂಸಿ ಒಟ್ಟು 14970 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 3,421 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಸಿಪಿಐ(ಎಂ) 1,392 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 829 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿವೆ.
ನೂತನ ಐಎಸ್‌ಎಫ್ ಪಕ್ಷ 1,362 ಸ್ಥಾನಗಳಲ್ಲಿ, ಟಿಎಂಸಿ ಬಂಡುಕೋರರು ಸೇರಿದಂತೆ ಸ್ವತಂತ್ರ ಅಭ್ಯರ್ಥಿಗಳು 216 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ವ್ಯಾಪಕ ಹಿಂಸಾಚಾರದ ನಡುವೆ ಸುಮಾರು 74,000 ಸೀಟುಗಳಿಗೆ ನಡೆದ ಪಂಚಾಯತ್ ಚುನಾವಣೆಗಳ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿತ್ತು. ಒಟ್ಟು ಸ್ಥಾನಗಳಲ್ಲಿ 9,730 ಪಂಚಾಯತ್ ಸಮಿತಿ ಸ್ಥಾನಗಳು, 928 ಜಿಲ್ಲಾ ಪರಿಷದ್ ಸ್ಥಾನಗಳು ಸೇರಿವೆ.
ಇಪ್ಪತ್ತೆರಡು ಜಿಲ್ಲೆಗಳಲ್ಲಿ 339 ಮತಎಣಿಕೆ ಕೇಂದ್ರಗಳಲ್ಲಿ ಎಣಿಕೆ ಕಾರ್ಯ ಬಿಗಿಭದ್ರತೆಯ ನಡುವೆ ಮುಂದುವರಿದಿದೆ. ಮತ ಎಣಿಕೆ ಕಾರ್ಯ ಎರಡು ದಿನ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.