ʼದಿ ನ್ಯೂಸ್‌ ಮಿನಿಟ್‌ʼ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್‌ಗೆ ಪ್ರತಿಷ್ಠಿತ ʼರೆಡ್‌ಇಂಕ್‌ʼ ಪ್ರಶಸ್ತಿ

Update: 2023-12-04 07:11 GMT

ಹೊಸದಿಲ್ಲಿ: ದಿ ನ್ಯೂಸ್‌ ಮಿನಿಟ್‌ ಆನ್‌ಲೈನ್‌ ಸುದ್ದಿ ತಾಣದ ಸಹ-ಸ್ಥಾಪಕಿ ಮತ್ತು ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್‌ ಅವರಿಗೆ ಮುಂಬೈ ಪ್ರೆಸ್‌ ಕ್ಲಬ್‌ “ಜರ್ನಿಲಿಸ್ಟ್‌ ಆಫ್‌ ದಿ ಇಯರ್”‌ ಎಂದು ಘೋಷಿಸಿ ತನ್ನ 2022 ನ್ಯಾಷನಲ್‌ ರೆಡ್‌ಇಂಕ್‌ ಅವಾರ್ಡ್‌ಗೆ ಆಯ್ಕೆಮಾಡಿದೆ.

2023 ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಮತದಾರ ಡೇಟಾವನ್ನು ತಿರುಚಿದ ಪ್ರಕರಣವನ್ನು ಬಹಿರಂಗಗೊಳಿಸಿದ ತನ್ನ ತಂಡದ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಧನ್ಯಾ ಅವರ ಜೊತೆಗೆ ಸ್ವತಂತ್ರ ಪತ್ರಕರ್ತ ಶರದ್‌ ವ್ಯಾಸ್‌ ಅವರನ್ನೂ ʼಜರ್ನಲಿಸ್ಟ್‌ ಆಫ್‌ ದಿ ಇಯರ್ʼಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಧನ್ಯಾ ಮತ್ತು ಅವರ ತಂಡದ ತನಿಖಾ ವರದಿಯ ಆಧಾರದಲ್ಲಿ ಚುನಾವಣಾ ಆಯೋಗವು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಮರುಪರಿಶೀಲನೆಗೆ ಸೂಚಿಸಿತ್ತು. ಈ ವರದಿಯ ಪರಿಣಾಮವಾಗಿ ಮತದಾರರ ಡೇಟಾ ವಂಚನೆ ಹಿಂದಿದ್ದ ಚಿಲುಮೆ ಎನ್‌ಜಿಒ ಇದರ ನಿರ್ದೇಶಕ ಕೃಷ್ಣಪ್ಪ ರವಿಕುಮಾರ್‌ ಅವರ ಬಂಧನವೂ ಆಗಿತ್ತು.

ಕಳೆದೆರಡು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಧನ್ಯಾ 2014ರಲ್ಲಿ ʼದಿ ನ್ಯೂಸ್‌ ಮಿನಿಟ್‌ʼ ಅನ್ನು ಸಹ-ಸ್ಥಾಪಿಸಿದ್ದರು ಹಾಗೂ ಈ ಮೂಲಕ ದಕ್ಷಿಣ ಭಾರತದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.

“ಜರ್ನಲಿಸ್ಟ್‌ ಆಫ್‌ ದಿ ಇಯರ್” ಪ್ರಶಸ್ತಿ ಪಡೆದ ಶರದ್‌ ವ್ಯಾಸ್‌ ಅವರು ಭಾರತ ಸರ್ಕಾರದ ಗುಪ್ತಚರ ಬ್ಯುರೋ ಇಸ್ರೇಲಿ ಕಂಪೆನಿ ಪೆಗಾಸಸ್‌ನಿಂದ ಸ್ಪೈ ಸಾಫ್ಟ್‌ವೇರ್‌ ಹೇಗೆ ಪಡೆದುಕೊಂಡಿತ್ತು ಎಂಬ ಕುರಿತು ವರದಿ ಪ್ರಕಟಿಸಿದ್ದರು.

ಹಿರಿಯ ಪತ್ರಕರ್ತೆ, ಅಂಕಣಗಾರ್ತಿ ಮತ್ತು ಲೇಖಕಿ ನೀರಜಾ ಚೌಧುರಿ ಅವರಿಗೆ ರೆಡ್‌ ಇಂಕ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News