ಟಾಪ್‌ ಸಿಟಿ ಹಗರಣ | ಪಾಕಿಸ್ತಾನದ ISI ಮಾಜಿ ಮುಖ್ಯಸ್ಥ ಫಯಾಝ್‌ ಹಮೀದ್‌ ವಶಕ್ಕೆ

Update: 2024-08-12 17:14 GMT

PC: globalvillagespace.com

ಇಸ್ಲಾಮಾಬಾದ್: ಟಾಪ್‌ ಸಿಟಿ ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ಮಾಜಿ ಮುಖ್ಯಸ್ಥ ನಿವೃತ್ತ ಲೆಫ್ಟಿನೆಂಟ್ ಜನರಲ್ ಫಯಾಝ್‌ ಹಮೀದ್ ಅವರನ್ನು ಕೋರ್ಟ್‌ ಮಾರ್ಷಲ್‌ಗಾಗಿ ಪಾಕಿಸ್ತಾನ ಸೇನೆಯ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

‘‘ಟಾಪ್‌ ಸಿಟಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಝ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಪರಿಶೀಲಿಸುವ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶದ ಭಾಗವಾಗಿ ಪಾಕಿಸ್ತಾನ ಸೇನೆಯು ವಿಸ್ತೃತವಾಗಿ ತನಿಖೆ ನಡೆಸಲಿದೆ. ಸೇನಾ ಕಾಯ್ದೆಯಡಿ ಲೆಫ್ಟಿನೆಂಟ್ ಜನರಲ್‌ ಫಯಾಝ್‌ ಹಮೀದ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2019ರಿಂದ 2021ರ ಅವಧಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ಹಮೀದ್ ಅವರು ಪ್ರಭಾವಿಯಾಗಿದ್ದರು ಎನ್ನಲಾಗಿದೆ. ಐಎಸ್‌ಐ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಕಳೆದ ಏಪ್ರಿನಲ್‌ ನಲ್ಲಿ ಅವರ ವಿರುದ್ಧ ಪಾಕಿಸ್ತಾನ ಸೇನೆಯು ತನಿಖಾ ಸಮಿತಿಯನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News