ರೈಲಿನಲ್ಲಿ ಸಂಚರಿಸಿ, ಪ್ರಯಾಣಿಕರೊಂದಿಗೆ ರಾಹುಲ್‌ ಗಾಂಧಿ ಸಂವಾದ: ವಿಡಿಯೋ ಬಿಡುಗಡೆ

Update: 2023-10-03 06:54 GMT

Photo credit- Twitter@INCIndia

ರಾಯ್‌ಪುರ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಛತ್ತೀಸ್‌ಗಢದ ಬಿಲಾಸ್‌ಪುರದಿಂದ ರಾಜಧಾನಿ ರಾಯ್‌ಪುರಕ್ಕೆ ರೈಲು ಯಾತ್ರೆ ಮಾಡಿದ್ದು, ಪ್ರಯಾಣಿಕರೊಂದಿಗೆ ಸಂವಾದದಲ್ಲಿ ತೊಡಗಿದ್ದ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ಸುಮಾರು 13 ನಿಮಿಷಗಳ ವೀಡಿಯೋವನ್ನು ಹಂಚಿಕೊಂಡಿರುವ ರಾಹುಲ್‌ ಗಾಂಧಿ, “ಬಿಲಾಸ್‌ಪುರ್‌ನಿಂದ ರಾಯ್‌ಪುರಕ್ಕೆ ಸಣ್ಣ ರೈಲು ಪ್ರಯಾಣದಲ್ಲಿ ಕಂಡ ಭಾರತದ ಒಂದು ನೋಟ! ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ, ಕೋಟ್ಯಂತರ ಜನರನ್ನು ಅವರ ಸ್ಥಳಗಳಿಗೆ ಸಾಗಿಸುವ ಭಾರತೀಯ ರೈಲ್ವೆ ನಿಜವಾಗಿಯೂ ಭಾರತದ ಪ್ರತಿಬಿಂಬವಾಗಿದೆ.ʼʼ ಎಂದು ಬರೆದುಕೊಂಡಿದ್ದಾರೆ. 

ರಾಹುಲ್‌ ಗಾಂಧಿ ಅವರು ಪ್ರಯಾಣಿಕರ ಸಮಸ್ಯೆ ಆಲಿಸುತ್ತಿರುವುದು ಸೇರಿದಂತೆ ಯಾತ್ರಿಕರೊಡನೆ ಬೆರೆತ ಹಲವು ಆತ್ಮೀಯ ಕ್ಷಣಗಳನ್ನು ವೀಡಿಯೊದಲ್ಲಿ ನೋಡಬಹುದಾಗಿದೆ.

ಸೆಪ್ಟಂಬರ್‌ 25ರಂದು ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ರಾಹುಲ್ ಗಾಂಧಿ ಅವರು ರೈಲಿನಲ್ಲಿ ರಾಯ್‌ಪುರಕ್ಕೆ ಹೊರಟಿದ್ದರು. ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಕ್ಷದ ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಮತ್ತು ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News