ತ್ರಿಪುರ: ಬಿಜೆಪಿ ಶಾಸಕನ ವಿರುದ್ಧ ಅಧಿವೇಶನದಲ್ಲಿ ಅಶ್ಲೀಲ ಚಿತ್ರ ನೋಡಿದ ಆರೋಪ; ಸದನಕ್ಕೆ ಗಂಗಾಜಲ ಸಿಂಪಡಣೆ

Update: 2023-07-07 16:27 GMT

Photo: nenow.in

ಅಗರ್ತಲಾ: ತ್ರಿಪುರಾ ಅಸೆಂಬ್ಲಿ ಅಧಿವೇಶನದದ ವೇಳೆ ಬಿಜೆಪಿ ಶಾಸಕರೊಬ್ಬರು ಅಶ್ಲೀಲ ಚಿತ್ರ ನೋಡಿದ್ದಾರೆಂದು ಆರೋಪಿಸಿ ವಿಪಕ್ಷ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದರಿಂದ ವಿಧಾನಸಭೆ ಅಶುದ್ಧವಾಗಿದೆಯೆಂದು ಕಾಂಗ್ರೆಸ್‌ ಶಾಸಕರು ಆರೋಪಿಸಿದ್ದು, ಸದನದ ಶುದ್ಧೀಕರಣಕ್ಕೆ ಗಂಗಾಜಲವನ್ನು ಸಿಂಪಡಿಸಿದ್ದಾರೆ.

ತ್ರಿಪುರಾ ವಿಧಾನಸಭೆಯ ಬಜೆಟ್ ಅಧಿವೇಶನ ಶುರುವಾಗುವ ಮುನ್ನ, ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ರಾಜ್ಯ ವಿಧಾನಸಭೆಯೊಳಗೆ ಗಂಗಾಜಲ ಸಿಂಪಡಿಸಿದ್ದಾರೆ.

ಕಳೆದ ವಿಧಾನಸಭೆ ಅಧಿವೇಶನದ ವೇಳೆ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಐವರು ಪ್ರತಿಪಕ್ಷ ನಾಯಕರನ್ನು ಸ್ಪೀಕರ್‌ ಅಮಾನತುಗೊಳಿಸಿದ್ದಾರೆ.

ಸದನದ ಕಲಾಪ ಮತ್ತು ಸದನದ ಗೌರವನನ್ನು ಕಡೆಗಣಿಸಿದ ಕಾರಣಕ್ಕಾಗಿ ಐವರು ವಿರೋಧ ಪಕ್ಷದ ಶಾಸಕರನ್ನು ಅಧಿವೇಶನದಿಂದ ಅಮಾನತುಗೊಳಿಸುವಂತೆ ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಅವರು ಸ್ಪೀಕರ್‌ಗೆ ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ತ್ರಿಪುರಾ ವಿಧಾನಸಭೆಯ ಸ್ಪೀಕರ್ ಬಿಸ್ವಬಂಧು ಸೇನ್ ಅವರು ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, ತಿಪ್ರಾ ಶಾಸಕರಾದ ಬಿರ್ಷಕೇತು ದೆಬ್ಬರ್ಮಾ, ರಂಜಿತ್ ದೆಬ್ಬರ್ಮಾ, ನಂದಿತಾ ರಿಯಾಂಗ್ ಮತ್ತು ಸಿಪಿಐ-ಎಂ ಶಾಸಕಿ ನಯನ್ ಸರ್ಕಾರ್ ಅವರನ್ನು ಅಧಿವೇಶನದಿಂದ ಅಮಾನತುಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News