ವಿವಿ, ಕಾಲೇಜುಗಳಲ್ಲಿ ಪ್ರಧಾನಿ ಮೋದಿ ʼಸೆಲ್ಫಿ ಪಾಯಿಂಟ್ʼಗಳ ಅಳವಡಿಕೆಗೆ ಹೊರಡಿಸಿದ್ದ ಆದೇಶ ಹಿಂಪಡೆದ ಯುಜಿಸಿ

Update: 2023-12-05 18:14 GMT

Photo: ugc.gov.in

ಹೊಸದಿಲ್ಲಿ: ದೇಶದ್ಯಾಂತಹ ಎಲ್ಲಾ ಯುನಿವರ್ಸಿಟಿ ಮತ್ತು ಕಾಲೇಜು ಆವರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಚಿತ್ರವಿರುವ ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸಲು ನ. 30ರಂದು ನೀಡಿದ್ದ ಆದೇಶವನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಹಿಂಪಡೆದುಕೊಂಡಿದೆ.

ನರೇಂದ್ರ ಮೋದಿ ಸೆಲ್ಫಿ ಪಾಯಿಂಟ್‌ ಅನ್ನು ಅಳವಡಿಸಲು ನೀಡಿರುವ ಆದೇಶದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಯುಜಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಯುಜಿಸಿ ಈ ಆದೇಶವನ್ನು ಹೊರಡಿಸಿದ ನಂತರ ಹಲವರಿಂದ ವಿರೋಧ ವ್ಯಕ್ತವಾಗಿತ್ತು. “ಯುಜಿಸಿಯ ನಿರ್ದೇಶನವನ್ನು ಆರಾಧನಾ ಸಂಸ್ಕೃತಿ” ಎಂದು ಹಲವರು ಟೀಕಿಸಿದ್ದರು.

2024ರ ಸಾರ್ವತ್ರಿಕ ಚುನಾವಣೆಗೆ ಮೋದಿಯ ಪ್ರಚಾರ ತಂತ್ರ ಎಂದು ಪ್ರತಿಪಕ್ಷಗಳೂ ಆಕ್ರೋಶ ವ್ಯಕ್ತಪಡಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News