ಯುಜಿಸಿ ಹೊಸ ಕರಡು ನಿಯಮಾವಳಿ: ವಿದ್ಯಾರ್ಥಿಗಳಿಗೆ ಏನು ಲಾಭ?

Update: 2024-12-06 02:17 GMT

ಹೊಸದಿಲ್ಲಿ: ಯಾವುದೇ ವಿಭಾಗದಲ್ಲಿ 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯಗಳಲ್ಲಿ ಪದವಿ ಪಡೆಯಲು ಅಥವಾ ಯಾವುದೇ ವಿಭಾಗದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ಮಾಡಿಕೊಡುವ ಹೊಸ ಕರಡು ನಿಯಮಾವಳಿಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳು ರಾಷ್ಟ್ರೀಯ ಅಥವಾ ವಿಶ್ವವಿದ್ಯಾನಿಲಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ತಮ್ಮ ಆಯ್ಕೆಯ ವಿಷಯಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಿದೆ. ವರ್ಷಕ್ಕೆ ಎರಡು ಬಾರಿ ಪ್ರವೇಶ ನೀಡುವ, ಪದವಿ ಪಡೆಯಲು ಕನಿಷ್ಠ ಕ್ರೆಡಿಟ್ ಅಗತ್ಯತೆ, ಅಂತರ ಶಿಸ್ತೀಯ ಕಲಿಕಾ ಅವಕಾಶಗಳನ್ನು ಒದಗಿಸಲು ಕೂಡಾ ಪ್ರಸ್ತಾವಿಸಲಾಗಿದೆ. ವಿದ್ಯಾರ್ಥಿಗಳು ಒಂದೇ ಬಾರಿ ಒಂದಕ್ಕಿಂತ ಹೆಚ್ಚು ಕೋರ್ಸ್ ಗಳನ್ನು ಕಲಿಯಲು ಕೂಡಾ ಅವಕಾಶವಾಗಲಿದೆ.

ಗುರುವಾರ ಕರಡು ಯುಜಿಸಿ ನಿಬಂಧನೆಗಳನ್ನು ಅಭಿಪ್ರಾಯ ಸಂಗ್ರಹ ಹಾಗೂ ಸಲಹೆಗಳಿಗಾಗಿ ಬಿಡುಗಡೆ ಮಾಡಲಾಗಿದ್ದು, ಇದು ಕೇಂದ್ರ, ರಾಜ್ಯ, ಖಾಸಗಿ ಮತ್ತು ಸ್ವಾಯತ್ತ ವಿಶ್ವವಿದ್ಯಾನಿಲಯಗಳಿಗೆ ಅನ್ವಯವಾಗಲಿದೆ. ಹೊಸ ನಿಯಮಾವಳಿಯು ಸಾಂಪ್ರದಾಯಿಕ ಶಿಸ್ತೀಯ ಕಠಿಣತೆಯನ್ನು ಸಡಿಲಗೊಳಿಸುವ ಉದ್ದೇಶ ಹೊಂದಿದೆ. ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ತಮ್ಮ ವಿಷಯದ ಹೊರತಾಗಿ ಪದವಿ/ ಸ್ನಾತಕೋತ್ತರ ಪದವಿಗೆ ಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿಸ್ಥಾಪಕತ್ವವನ್ನು ಹೊಸ ನಿಮಯಾವಳಿ ನೀಡಲಿದೆ.

"ಲೆವೆಲ್ 4 ಅಥವಾ 12ನೇ ತರಗತಿಯಲ್ಲಿ ಯಾವುದೇ ವಿಷಯಗಳನ್ನು ವಿದ್ಯಾರ್ಥಿ ಕಲಿತಿದ್ದರೂ, ರಾಷ್ಟ್ರಮಟ್ಟದ ಅಥವಾ ವಿಶ್ವವಿದ್ಯಾನಿಲಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಪದವಿ ಕೋರ್ಸ್ ಗೆ ತಮ್ಮ ಇಚ್ಛೆಯ ಯಾವುದೇ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ" ಎಂದು ಹೊಸ ನಿಯಮ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News