ಉತ್ತರ ಪ್ರದೇಶ | ಸಿಬಿಐ ದಾಳಿ ಬಳಿಕ ಆತ್ಮಹತ್ಯೆಗೆ ಶರಣಾದ ಅಂಚೆ ಇಲಾಖೆ ಅಧಿಕಾರಿ

Update: 2024-08-21 16:14 GMT

ಟಿ.ಪಿ. ಸಿಂಗ್ | PC : PTI  

ಲಕ್ನೊ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ದಾಳಿಯ ಹಿನ್ನೆಲೆಯಲ್ಲಿ ಅಂಚೆ ಕಚೇರಿಯ ಅಧೀಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಬುಲಂದಶಹರ್‌ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಟಿ.ಪಿ. ಸಿಂಗ್ ಎಂದು ಗುರುತಿಸಲಾಗಿದೆ. ಕಚೇರಿಯ ಸಹೋದ್ಯೋಗಿಗಳ ಕಿರುಕುಳದಿಂದ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಸಿಂಗ್ ಸುಸೈಡ್ ನೋಟ್‌ನಲ್ಲಿ ಹೇಳಿದ್ದಾರೆ.

ಸಿಬಿಐ ಬುಧವಾರ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಟಿ.ಪಿ. ಸಿಂಗ್ ಅಲಿಗಢದಲ್ಲಿರುವ ತನ್ನ ನಿವಾಸಕ್ಕೆ ತೆರಳಿದ್ದಾರೆ. ಅನಂತರ ಸುಸೈಡ್ ನೋಟ್ ಅನ್ನು ಹಲವು ವ್ಯಾಟ್ಸ್ ಆ್ಯಪ್ ಗುಂಪುಗಳಿಗೆ ರವಾನಿಸಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2024 ಆಗಸ್ಟ್ 21ರ ದಿನಾಂಕದ ಪತ್ರದಲ್ಲಿ ಸಿಂಗ್, ಕಚೇರಿಯ ಹಲವು ಸಹೋದ್ಯೋಗಿಗಳು ತನಗೆ ಕಿರುಕುಳ ನೀಡಿದರು ಹಾಗೂ ಅನಗತ್ಯ ಒತ್ತಡ ಹೇರಿದರು ಎಂದು ಪ್ರತಿಪಾದಿಸಿದ್ದಾರೆ. ಆಲಿಗಢ ಪೊಲೀಸ್ ವರಿಷ್ಠರ ವಿಳಾಸಕ್ಕೆ ಬರೆದ ಈ ಪತ್ರದಲ್ಲಿ ಅವರು ಹಲವು ಸಹೋದ್ಯೋಗಿಗಳ ಹೆಸರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News